ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಗಾಯಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಚಾಕ್ಲೇಟ್ ಪ್ರತಿಮೆ ತಯಾರಾಗಿದೆ.
ತಮಿಳುನಾಡಿನ ಪುದುಚೇರಿಯ ಅಂಗಡಿ ಮಾಲೀಕ ಚಾಕ್ಲೇಟ್ ನಲ್ಲಿ ಎಸ್ಪಿಬಿ ಪ್ರತಿಮೆ ನಿರ್ಮಿಸಿದ್ದಾರೆ. 5.8 ಅಡಿ ಎತ್ತರ ಇರುವ ಪ್ರತಿಮೆ 339 ಕೆಜಿ ತೂಕ ಇದೆ. ಪುದುಚೇರಿಯ ಮಿಷನ್ ಸ್ಟ್ರೀಟ್ ನಲ್ಲಿರುವ ಅಂಗಡಿಯಲ್ಲಿ ಪ್ರತಿಮೆ ತಯಾರಿಸಿ ಪ್ರದರ್ಶಿಸಲಾಗುತ್ತಿದೆ.
ಜನವರಿ 3ರವರೆಗೆ ಈ ಪ್ರತಿಮೆ ಇಲ್ಲಿ ಪ್ರದರ್ಶಿತವಾಗಲಿದೆ. ಕ್ರಿಸ್ ಮಸ್ ಅಂಗವಾಗಿ ಈ ಕೇಕ್ ತಯಾರಿಸಲಾಗಿದ್ದು ಎಸ್ಪಿಬಿ ಅಭಿಮಾನಿಗಳು ಕುತೂಹಲದಿಂದ ಕೇಕ್ ವೀಕ್ಷಿಸುತ್ತಿದ್ದಾರೆ.
PublicNext
24/12/2020 10:11 am