ನವದೆಹಲಿ: ಮಕ್ಕಳು ಏನು ಮಾಡಿದರೂ ಚಂದ ಅತ್ತರು ಚಂದ ನಕ್ಕರು ಚಂದ ಕೆಲವೊಮ್ಮೆ ಗಂಭೀರ ವಿಷಯಗಳಲ್ಲಿಯೂ ಮುಗ್ಧ ಮಕ್ಕಳು ಮಾಡುವ ತುಂಟಾಟ ಇನ್ನೂ ಚಂದ.
ಇಲ್ಲೊಂದು ಮಗು ಮಾಡಿದ್ದು ಅದನ್ನೇ ನೋಡಿ ಹೌದು ತಾಯಿ-ಮಗಳು ಚರ್ಚ್‌ಗೆ ತೆರಳಿದ ವೇಳೆ ಪಾದ್ರಿ ಪುಟ್ಟ ಬಾಲಕಿಗೆ ಆಶೀರ್ವದಿಸಲು ಮುಂದಾಗಿದ್ದು, ಪಾದ್ರಿ ಕೈ ಮುಂದೆ ತರುತ್ತಿದ್ದಂತೆ ತನ್ನ ಕೈ ಸೇರಿಸಿ ಬಾಲಕಿ ಹೈ ಫೈ ಮಾಡಿದ್ದಾಳೆ.
ಈ ಕ್ಯೂಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋವನ್ನು ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಪ್ ಮಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಫಾದರ್ ಆಶೀರ್ವದಿಸಲು ಕೈ ಮುಂದೆ ತಂದರೆ, ಮುಗ್ಧ ಬಾಲಕಿ ಹೈ ಫೈ ಮಾಡುತ್ತಾಳೆ.
ಆಗ ಫಾದರ್ ನಗು ತಡೆಯಲು ಯತ್ನಿಸುತ್ತಾರೆ. ತುಂಬಾ ಒಳ್ಳೆಯದನ್ನು ನೀವು ಇಂದು ನೋಡುತ್ತಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಬಾಲಕಿಯ ಮುಗ್ಧತೆ ಕಂಡು ಫಾದರ್ ಬೆರಗಾಗಿದ್ದು, ನಗುವಿನಲ್ಲಿ ತೇಲುವಂತೆ ಮಾಡಿದೆ.
ನಂತರ ಮುಖವನ್ನು ಕೈಯಿಂದ ಮುಚ್ಚಿಕೊಂಡು ಬಾಲಕಿಗೆ ಆಶೀರ್ವದಿಸುತ್ತಾರೆ. ಈ ವಿಡಿಯೋ ನಿರೀಕ್ಷೆಯಂತೆ ಸಖತ್ ವೈರಲ್ ಆಗಿದ್ದು, 22 ಬಾರಿ ವೀಕ್ಷಣೆಯಾಗಿದೆ.
28,900ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ 6,300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಬಾಲಕಿ ಹೈ ಫೈ ಮಾಡಿರುವುದು, ಫಾದರ್ ನಗುವಿನಲ್ಲಿ ತೇಲಿರುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.
PublicNext
23/10/2020 04:14 pm