ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನಾಳೆಯಿಂದ ಆರಂಭ ಆಗುತ್ತಿದೆ. ಜೂನ್-27 ರಿಂದ ಜುಲೈ-04 ರವರೆಗೂ ಈ ಪರೀಕ್ಷೆ ನಡೆಯಲಿವೆ.
94,649 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಒಟ್ಟು 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ.
ಈ ವರ್ಷ ಒಟ್ಟು 8,20,900 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ, 8,07,206 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.20,406 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ರೀಪಿಟರ್ಸ್ ಸೇರಿ ಒಟ್ಟು 8,53,436 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 625 ಒಟ್ಟು ಅಂಕಕ್ಕೆ 625 ಅಂಕಗಳನ್ನ 145 ವಿದ್ಯಾರ್ಥಿಗಳು ಪಡೆದಿದ್ದರು.
PublicNext
26/06/2022 08:37 pm