ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ಮಲೇಶ್ವರಂನ ಪಿಯುಸಿ ಬೋರ್ಡ್ ನಲ್ಲಿ ಫಲಿತಾಂಶ ಪ್ರಕಟ್ಟಿಸಿದ್ದಾರೆ. ಶೇಕಡ 61.88 ರಷ್ಟು ವಿದ್ಯಾರ್ಥಿಗಳು ಈ ಸಲ ಪಾಸ್ ಆಗಿದ್ದಾರೆ.
ವಿಶೇಷವೆಂದ್ರೆ ಈ ಸಲ ಸೈನ್ಸ್ ವಿದ್ಯಾರ್ಥಿಗಳೇ ಹೆಚ್ಚು ಪಾಸ್ ಆಗಿದ್ದಾರೆ. ಎಂದಿನಂತೆ ಬಾಲಕಿಯರೂ ಈ ಸಲವೂ ಟಾಪ್ ಅಲ್ಲಿಯೇ ಇದ್ದಾರೆ. ಇನ್ನೂ ಒಂದು ವಿಶೇಷವೆಂದ್ರೆ, ಈ ಸಲ ಗ್ರಾಮೀಣ ಭಾಗದಲ್ಲಿ ಒಳ್ಳೆ ರಿಸಲ್ಟ್ ಬಂದಿದೆ.
ನಗರ ಭಾಗದಲ್ಲಿ ಶೇಕಡ 61.78 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ ಶೇಕಡ 62.18 ರಷ್ಟು ಫಲಿತಾಂಶ ಬಂದಿರೋದು ವಿಶೇಷ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿಯೇ ಇದೆ. ಚಿತ್ರದುರ್ಗ ಜಿಲ್ಲೆ ಕೊನೆ ಸ್ಥಾನದಲ್ಲಿಯೇ ಇದೆ ಎಂದು ಶಿಕ್ಷಣ ಸಚಿವರು ಮಾಹಿತಿ ಕೊಟ್ಟಿದ್ದಾರೆ.
ಫಲಿತಾಂಶಕ್ಕಾಗಿ ಈ ವೆಬ್ ಸೈಟ್ ವಿಸಿಟ್ ಮಾಡಿ:karresuilts.nic.in ಅಥವಾ kseeb.kar.nic.in ಅಥವಾ pue.kar.nic.in
PublicNext
18/06/2022 01:24 pm