ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದೇ ಜೂನ್-24ಕ್ಕೆ ಅಗ್ನಿಪಥ ಅಡಿ ಅಗ್ನಿವೀರರ ನೇಮಕಾತಿ ಆರಂಭ !

ನವದಹೆಲಿ: ದೇಶೆದೆಲ್ಲೆಡೆ ಅಗ್ನಿಪಥ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಇತ್ತ ಕಡೆ ಈ ಯೋಜನೆಯ ನೇಮಕಾತಿ ಶುರು ಆಗುತ್ತಿದೆ. ಇದೇ ಜೂನ್-24 ರಿಂದಲೇ ಅಗ್ನಿವೀರರ ಆಯ್ಕೆ ಪ್ರಕ್ರಿಯೆ ಶುರು ಆಗುತ್ತಿದೆ.

ಈ ಹಿನ್ನೆಲೆಯಲ್ಲಿಯೇ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸುದ್ದಿಗೋಷ್ಠಿ ನಡೆಸಿದ್ದಾರೆ.ಮುಂದಿನ ವಾರವೇ ಅಗ್ನಿವೀರರ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಸೇನೆಗೆ ಸೇರೋ ಯುವಕರ ವಯಸ್ಸನ್ನ ಈಗ 23ಕ್ಕೆ ಏರಿಸಲಾಗಿದೆ ಎಂದು ಕೂಡ ವಿವರಣೆ ನೀಡಿದ್ದಾರೆ.

ಆದರೆ, ಈ ಯೋಜನೆಯನ್ನ ಹಿಂದಕ್ಕೆ ಪಡೆಯಬೇಕು ಅಂತಲೇ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಇದೆ. ಯಾವುದೇ ರೀತಿ ಸ್ಪಷ್ಟೀಕರಣ ನೀಡಿದರೂ ಇದು ನಿಲ್ಲುತ್ತಲೇ ಇಲ್ಲ. ವಿರೋಧ ಪಕ್ಷಗಳೂ ಈ ಒಂದು ಅಗ್ನಪಥ ಯೋಜನೆ ಜಾರಿಯನ್ನ ಖಂಡಿಸುತ್ತಲೇ ಇದ್ದಾರೆ.

Edited By :
PublicNext

PublicNext

18/06/2022 08:21 am

Cinque Terre

32.67 K

Cinque Terre

4