ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್ 19 ರಂದು ಕಾಮೆಡ್-ಕೆ ಎಕ್ಸಾಂ

ವೃತ್ತಿಶಿಕ್ಷಣ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಗಿದ ಮರುದಿನವೇ ಅಂದರೆ ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ ನಡೆಯಲಿದೆ. ಅಂದು ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2:50 ರಿಂದ 5:50 ರವರೆಗೆ ನಡೆಯಲಿದೆ. ಜೂನ್ 22ರಂದು ತಾತ್ಕಾಲಿಕ ಕೀ ಉತ್ತರ ಬಿಡುಗಡೆ ಮಾಡಲಾಗುತ್ತದೆ.

ಪರೀಕ್ಷಾ ಅಂಕಗಳು ಜುಲೈ 5 ರಂದು ಬೆಳಗ್ಗೆ 11 ರಿಂದ ಅಭ್ಯರ್ಥಿಗಳಿಗೆ ಆನ್‌ಲೈನ್‌​ನಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಕಾಮೆಡ್-ಕೆ ತನ್ನ ಯುಜಿಇಟಿ ಪರೀಕ್ಷೆಯನ್ನು ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ದೇಶಾದ್ಯಂತ ಆಯ್ದ ಪ್ಯಾನ್-ಇಂಡಿಯಾ ಸದಸ್ಯ ವಿಶ್ವವಿದ್ಯಾಲಯಗಳಲ್ಲಿ ನಡೆಯಲಿದೆ.

Edited By : Nirmala Aralikatti
PublicNext

PublicNext

17/06/2022 10:35 pm

Cinque Terre

30.7 K

Cinque Terre

0