ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಮದುವೆ ದಿನವೇ ವಧು ಎಂಕಾಂ ಪರೀಕ್ಷೆಗೆ ಹಾಜರ್!; ವೀಡಿಯೊ ವೈರಲ್

ಮಂಡ್ಯ: ಈ ಮದುಮಗಳು ತನ್ನ ಮದುವೆಯಾದ ಕೂಡಲೇ ಮದುವೆ ಮಂಟಪ ಬಿಟ್ಟು ಪರೀಕ್ಷಾ ಕೊಠಡಿಗೆ ಹಾಜರಾಗುವ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾಳೆ. ಹೌದು, ಮಂಡ್ಯ ಜಿಲ್ಲೆ ಪಾಂಡವಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಪಾಂಡವಪುರ ತಾಲೂಕಿನ ಲಿಂಗಾಪುರದ ಐಶ್ವರ್ಯ ಮತ್ತು ಶ್ರೀರಂಗಪಟ್ಟಣದ ಲಕ್ಷ್ಮೀಪುರದ ಅವಿನಾಶ್‌ಗೆ ಮದುವೆ ನಡೆಯಿತು.

ಮದುವೆ ಬಳಿಕ ಕಲ್ಯಾಣ ಮಂಟಪದಿಂದ ನೇರವಾಗಿ ಪಾಂಡವಪುರದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ತನ್ನ ಮೊದಲ‌ ವರ್ಷದ‌ ಎಂಕಾಂ ಪರೀಕ್ಷೆಯನ್ನು ಐಶ್ವರ್ಯ ಬರೆದಿದ್ದಾಳೆ. ಶಿಕ್ಷಣವನ್ನು ಯಾವ ಸಂದರ್ಭದಲ್ಲೂ ಅರ್ಧಕ್ಕೆ ನಿಲ್ಲಿಸಬಾರದೆಂದು ಈಕೆ ತೋರಿಸಿ ಕೊಟ್ಟಿದ್ದಾಳೆ.

ಈ‌ ಮೂಲಕ ಐಶ್ವರ್ಯ ಹಾಗೂ ಆಕೆ ಪತಿ ಮತ್ತು ಅತ್ತೆ- ಮಾವ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ. ಸದ್ಯ, ಮದುಮಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Edited By : Shivu K
PublicNext

PublicNext

13/05/2022 12:15 pm

Cinque Terre

49.15 K

Cinque Terre

3