ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ದೇಶದಲ್ಲಿ ಇದ್ದುಕೊಂಡೇ ವಿದೇಶಗಳ ವಿವಿ ಪದವಿ ಪಡೆಯಬಹುದು !

ನವದೆಹಲಿ: ವಿದೇಶದಲ್ಲಿ ಶಿಕ್ಷಣ ಪಡೆಯೋಕೆ ಪರದಾಡಬೇಕಿಲ್ಲ. ನಮ್ಮ ದೇಶದಲ್ಲಿಯೇ ಇದ್ದುಕೊಂಡೇ ವಿದೇಶದಲ್ಲಿ ಶಿಕ್ಷಣ ಮಾಡಬಹುದಾಗಿದೆ. ಯುಜಿಸಿ ಈ ಒಂದು ಅವಕಾಶವನ್ನ ಕಲ್ಪಿಸಿಕೊಡುವ ನಿರ್ಧಾರವನ್ನ ಈಗ ಪ್ರಕಟಿಸಿದೆ.

ಈ ಬಗ್ಗೆ ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೀಶ್ ಕುಮಾರ್ ಮಾತನಾಡಿದ್ದಾರೆ. QS ಹಾಗೂ ಟೈಮ್ಸ್ ಹೈಯರ್ ಎಜುಕೇಶನ್ Ranking ನಲ್ಲಿ 1 ಸಾವಿರದ ಒಳಗೆ ಇರೋ ವಿದೇಶಿ ವಿವಿ ಮತ್ತು ಶಿಕ್ಷಣ ಸಂಸ್ಥೆಗಳ ಜೊತೆಗೆ ಶೈಕ್ಷಣಿಕ ಸಹಭಾಗಿತ್ವ ಹೊಂದಲ ಅವಕಾಶ ಇದೆ ಎಂದು ವಿವರಿಸಿದ್ದಾರೆ.

ಈ ಒಂದು ಅವಕಾಶದಿಂದಲೇ ದೇಶ ಮತ್ತು ವಿದೇಶದ ಶಿಕ್ಷಣ ಸಂಸ್ಥೆ ಮುಖಾಂತರ ಒಂದೇ ಬಾರಿಗೆ ಎರಡು ಪದವಿ ಪಡೆಯಲು ಸಾಧ್ಯವಾಗುತ್ತದೆ ಅಂತಲೂ ಹೇಳಿದ್ದಾರೆ.

Edited By :
PublicNext

PublicNext

20/04/2022 01:09 pm

Cinque Terre

23.24 K

Cinque Terre

0

ಸಂಬಂಧಿತ ಸುದ್ದಿ