ಬೆಂಗಳೂರು : ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ಮೊದಲ ದಿನವೇ 20,994 ವಿದ್ಯಾರ್ಥಿಗಳು ಹಲವು ಕಾರಣಗಳಿಂದ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇಂದು ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ಸುಮಾರು 8,69,399 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 8,48,405 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಪರೀಕ್ಷಾ ಅಕ್ರಮ, ಅವ್ಯವಹಾರದಲ್ಲಿ ಯಾರು ಭಾಗಿಯಾಗಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ. ಹಾಗೇ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ. ಮೊದಲ ಬಾರಿಗೆ ಹಾಜರಾದ ವಿದ್ಯಾರ್ಥಿಗಳು- 8,11,195ಖಾಸಗಿ ಅಭ್ಯರ್ಥಿಗಳು- 35,509ಪುನರಾವರ್ತಿತ ವಿದ್ಯಾರ್ಥಿಗಳು- 1,701 ಅನಾರೋಗ್ಯ ಹಿನ್ನೆಲೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದವರು- 336 ವಿದ್ಯಾರ್ಥಿಗಳು
ದಾಖಲಾತಿ- 8,48,405
ಗೈರು ಹಾಜರಿ- 20,994
ಶೇಕಡಾವಾರು- 97.59%
ಕಳೆದ ವರ್ಷ ಪರೀಕ್ಷೆಗೆ ಕೇವಲ 3,769 ವಿದ್ಯಾರ್ಥಿಗಳು ಗೈರಾಗಿದ್ದರೆ, ಈ ಬಾರಿ ಬರೋಬ್ಬರಿ 20,994 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದಕ್ಕೆ ಹಿಜಾಬ್ ವಿವಾದ ಕಾರಣವೋ ಅಥವಾ ಬೇರೆ ಏನು ಕಾರಣ ಎಂಬುದನ್ನ ಶಿಕ್ಷಣ ಇಲಾಖೆ ಪತ್ತೆ ಮಾಡಬೇಕಿದೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ಸಾಧಾರಣ ರೀತಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿದೆ.
PublicNext
28/03/2022 06:22 pm