ಕಾಬೂಲ್: ಅಪಘಾನಿಸ್ತಾನದ ಸುತ್ತ-ಮುತ್ತಲಿನ ಹುಡುಗಿಯರಿಗೂ ಶಿಕ್ಷಣ ನೀಡಲಾಗುವುದು. ಮುಂದಿನ ವಾರ ಹೈಸ್ಕೂಲ್ ಓಪನ್ ಆಗುತ್ತಿವೆ. ಆಗ ಈ ಹುಡುಗಿಯರಿಗೂ ಅವಕಾಶ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಈಗಾಗಲೇ ಹೇಳಿದ್ದಾರೆ.
ತಾಲಿಬಾನ್ ಸರ್ಕಾರ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಸಂಪೂರ್ಣ ಪ್ರವೇಶವನ್ನ ನೀಡುತ್ತದೆಯೇ ಅನ್ನೋ ಮಾತು ಕೇಳಿ ಬರ್ತಾನೇ ಇತ್ತು.
ಆದರೆ ಈಗ ಶಿಕ್ಷಣ ಸಚಿವಾಲಯದ ವಕ್ತಾರ ಅಜೀಜ್ ಅಹ್ಮದ್ ರಾಯಾನ್ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಮುಂದಿನ ವಾರದಿಂದ ಶಾಲೆಗಳು ಓಪನ್ ಆಗುತ್ತಿವೆ. ಹುಡುಗರು ಮತ್ತು ಹುಡುಗಿಯರು ಓದಲು ಅವಕಾಶ ನೀಡಲಾಗುತ್ತಿದೆ. ಆದರೆ ಹುಡುಗಿಯರಿಗೆ ಕೆಲವು ಷರತ್ತುಗಳು ಇವೆ ಎಂದಿದ್ದಾರೆ.
ವಿದ್ಯಾರ್ಥಿನಿಯರಿಗೆ ಇಲ್ಲಿ ಮಹಿಳಾ ಶಿಕ್ಷಕಿಯರೇ ಪಾಠ ಮಾಡುತ್ತಾರೆ.ಆದರೆ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶಿಕ್ಷಕಿಯರ ಕೊರತೆ ಇದೆ. ಅಲ್ಲಿ ಪುರುಷ ಶಿಕ್ಷಕರೇ ಪಾಠ ಮಾಡುತ್ತಾರೆ ಅಮತಲೇ ಅಜೀಜ್ ವಿವರಿಸಿದ್ದಾರೆ.
PublicNext
18/03/2022 05:33 pm