ಬೆಂಗಳೂರು: ಪ್ರಸಕ್ತ ವರ್ಷದ 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ತಿಂಗಳ ಕಾಲ ಮುಂದೂಡಲ್ಪಡುವ ಸಂಭವ ಇದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯಲ್ಲಿ ಎಕ್ಸಾಂ ಮಾಡ ಲಾಗುತ್ತಿತ್ತು. ಆದರೆ ಕೋವಿಡ್ ನಿಂದಾಗಿ ವಿದ್ಯಾರ್ಥಿಗಳಿಗೆ ಹೈಸ್ಕೂಲ್ ಆರಂಭ ವಿಳಂಬವಾಗಿದೆ.
ಈ ಕಾರಣದಿಂದ ಪಠ್ಯದಲ್ಲೂ ಶೇ.20% ಕಡಿತ ಮಾಡಲಾಗಿದೆ. ಪರಿಣಾಮ ಸಿಲೆಬೆಸ್ ಮುಗಿಸಲು ಮಾರ್ಚ್ ತಿಂಗಳ ಆರಂಭ ಆಗಬಹುದು.
ಮಧ್ಯ ವಾರ್ಷಿಕ ಪರೀಕ್ಷೆ ಜ.2022 ಮೊದಲ ವಾರದಲ್ಲಿ ನಡೆಯಬಹುದು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಎಸ್ ಎಸ್ ಎಲ್ ಸಿ ಬೋರ್ಡ್ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದು ಕೊಳ್ಳಲಾಗಿದೆ.
PublicNext
29/12/2021 09:09 am