ಕೊಪ್ಪಳ: ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕೊಪ್ಪಳದ ವಿದ್ಯಾರ್ಥಿನಿ 'ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ' ಎಂದು ಮಠಾಧೀಶರಿಗೆ ಸವಾಲು ಹಾಕಿದ್ದಾಳೆ.
ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧಿಸಿದ್ದಕ್ಕೆ ಕೊಪ್ಪಳದ ಗಂಗಾವತಿಯ ವಿದ್ಯಾರ್ಥಿನಿ ತಿರುಗಿ ಬಿದ್ದಿದ್ದಾಳೆ. 'ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ರಾಜಕೀಯ ಮಾಡಬೇಡಿ. ಮೊಟ್ಟೆ ಕೊಡಬೇಡಿ ಎಂದು ಹೇಳಿದರೆ ನಾವು ನಿಮ್ಮ ಮಠಕ್ಕೆ ಬಂದು ಕುಳಿತು ಮಠದಲ್ಲಿಯೇ ಮೊಟ್ಟೆ ತಿಂತೀವಿ. ಏನ್ಮಾಡ್ತಿರೋ ನೋಡ್ತಿವಿ' ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
12/12/2021 09:30 am