ಬೆಂಗಳೂರು: ರಾಜ್ಯ ಸರ್ಕಾರ ಈಗ ಅಂಗನವಾಡಿ ಕೇಂದ್ರಗಳನ್ನು ಶುರು ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನವೆಂಬರ್-08 ರಿಂದಲೇ ಅಂಗನವಾಡಿ ಕೇಂದ್ರಗಳು ಆರಂಭಗೊಳ್ಳುತ್ತವೆ. ಆದರೆ ಸರ್ಕಾರ ಕೆಲವು ಕಟ್ಟು ನಿಟ್ಟಿನ ಮಾರ್ಗ ಸೂಚಿಗಳನ್ನೂ ಜಾರಿಗೊಳಿಸಿದೆ.
ರಾಜ್ಯದ ಎಲ್ಲ ಶಾಲೆಗಳು ಈಗ ಆರಂಭಗೊಂಡಿವೆ. ಮಕ್ಕಳು ಶಾಲೆಗೂ ಬರುತ್ತಿದ್ದಾರೆ. ಈಗ ಅಂಗನವಾಡಿ ಕೇಂದ್ರಗಳನ್ನ ಆರಂಭಿಸೋಕೆ ಸರ್ಕಾರ ಮನಸ್ಸು ಮಾಡಿದೆ. ಕೆಲವೊಂದು ಮಾರ್ಗ ಸೂಚಿಗಳನ್ನೂ ತಿಳಿಸಿದೆ. ಅವು ಇಂತಿವೆ.
-ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಎರಡೂ ಡೋಸ್ ಲಸಿಕೆ ಪಡೆದಿರಬೇಕು.
- ಮಕ್ಕಳ ಪೋಷಕರೂ ಕೂಡ ಎರಡು ಡೋಸ್ ಲಸಿಕೆ ಪಡೆದಿರಬೇಕು.
-ಅಂಗನವಾಡಿಯಲ್ಲಿ ಮಕ್ಕಳು ಬಳಸುವ ಎಲ್ಲ ಆಟಿಕೆಗಳು ಮತ್ತು ವಸ್ತುಗಳು ಶುಚಿಯಾಗಿರಬೇಕು.
-ಇಡೀ ಅಂಗನವಾಡಿ ಸೋಪು ನೀರಿನಿಂದ ಶುದ್ಧಗೊಳಿಸಿರಬೇಕು.
- ಮಕ್ಕಳಿಗೆ ಆಹಾರ ತಯಾರಿಸೋ ಪಾತ್ರೆಗಳೆಲ್ಲ ಪರಿಶುದ್ಧವಾಗಿರಲೇಬೇಕು.
ಇಷ್ಟೇ ಅಲ್ಲ ಇನ್ನೂ ಹಲವು ನಿಯಮಗಳಿವೆ. ಇಲ್ಲಿ ಪ್ರಮುಖವಾದವುಗಳನ್ನ ಇಲ್ಲಿ ಕೊಟ್ಟಿದ್ದೇವೆ. ಆದರೆ ಇವುಗಳನ್ನ ಎಷ್ಟು ಕೇಂದ್ರಗಳು ಅನುಸರಿಸುತ್ತವೆಯೋ ಏನೋ. ಆದರೆ ಇದೇ ನವೆಂಬರ್-08 ರಿಂದ ಬೆಳಗ್ಗೆ 10 ರಿಂದ 12 ರವರೆಗೂ ಅಂಗನವಾಡಿ ಕೇಂದ್ರಗಳು ತೆರೆದಿರುತ್ತವೆ.
PublicNext
02/11/2021 04:11 pm