ಮಂಗಳೂರು: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ನಗರದ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಜಶನ್ ಛಾಬ್ರಾ 720ಕ್ಕೆ 715 ಅಂಕ ಪಡೆದಿದ್ದಾರೆ. ಈ ಮೂಲಕ ಅಖಿಲ ಭಾರತ ನೀಟ್ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದಿದ್ದಾರೆ.
ತೆಲಂಗಾಣ, ದಿಲ್ಲಿ ಹಾಗೂ ಮಹಾರಾಷ್ಟ್ರದ ತಲಾ ಓರ್ವ ವಿದ್ಯಾರ್ಥಿ 720ರಲ್ಲಿ 720 ಅಂಕ ಪಡೆದು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ. ಉತ್ತರ ಪ್ರದೇಶದ ಇನ್ನೋರ್ವ ವಿದ್ಯಾರ್ಥಿ 716 ಅಂಕ ಪಡೆಯುವ ಮೂಲಕ 4ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗೂ ಮಂಗಳೂರಿನ ಜಶನ್ ಛಾಬ್ರಾ, ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್.ಕೆ ಮೇಘನ್ ಸಹಿತ 12 ವಿದ್ಯಾರ್ಥಿಗಳು 715 ಅಂಕ ಪಡೆದು 5 ನೇ ರ‍್ಯಾಂಕ್ ಪಡೆದಿದ್ದಾರೆ. ಈ ಮೂಲಕ ಈ ಎಲ್ಲ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.
PublicNext
02/11/2021 03:33 pm