ಬೆಳಗಾವಿ : ಕೊರೋನಾದಿಂದ ಮನೆಪಾಠದಿಂದ ಬೇಸತ್ತ ವಿದ್ಯಾರ್ಥಿಗಳು ಶಾಲೆ ಯಾವಾಗ ಶುರುವಾಗುತ್ತೊ ಎಂದು ಕಾಯುತ್ತಲಿದ್ದರು.ಇದೀಗ ಶಾಲೆ ಆರಂಭವಾದರು ಶಾಲೆಗೆ ಹೋಗಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ಜಿಲ್ಲೆಯ ಬೈಲಹೊಂಗಲದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗಂಟೆಗಟ್ಟಲೇ ರಸ್ತೆ ಬದಿಯಲ್ಲೇ ಬಸ್ ಗಾಗಿ ಕಾಯುವ ಪರಿಸ್ಥಿತಿ ಇದೆ.
ವಿದ್ಯಾರ್ಥಿಗಳಿಗೆ ಬಸ್ ಕೊರತೆ ಇರುವುದರಿಂದ ಶಾಲೆ ಶುರುವಾದ ಮೊದಲ ದಿನವೇ ಇಂದು ಪ್ರತಿಭಟನೆ ನಡೆಸಿದರು.ಬಸ್ ಕೊರತೆಯಿಂದ ಪಟ್ಟಣದ ಬಸವೇಶ್ವರ ಬಡಾವಣೆಯಿಂದ ಬೇವಿನಕೊಪ್ಪದವರೆಗೆ ಸುಮಾರು 6ಕಿ.ಮೀ.ವರೆಗೆ ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದು ನಿತ್ಯ 2ಗಂಟೆ ಕಾಯಬೇಕಾದ ಪರಿಸ್ಥಿತಿ ಇದೆ.
ಸಕಾಲಕ್ಕೆ ಬಸ್ ಬಾರದೆ ಆಕ್ರೋಶಿತರಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಎಸ್ ಆರ್ ಟಿಸಿ ವಿರುದ್ಧ ಪ್ರತಿಭಟನೆ ನಡೆಸಿದರು. ಇನ್ನೂ ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ಹಲವಾರು ಮಂದಿ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಈ ಕೂಡಲೆ ವಿದ್ಯಾರ್ಥಿಗಳಿಗೆ ತೆರಳಲು ಸಮರ್ಪಕ ವ್ಯವಸ್ಥೆ ಮಾಡಿಕೊಡಬೇಕೆಂಬುದು ವಿದ್ಯಾರ್ಥಿಗಳ ಒಕ್ಕೊರಲ ಬೇಡಿಕೆಯಾಗಿದೆ.
PublicNext
26/10/2021 09:25 pm