ಬೆಂಗಳೂರು : ನ್ಯೂ ಇಯರ್ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ.
ಸಕಲ ಸಿದ್ಧತೆಗಳೊಂದಿಗೆ ವಿಧ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ.
ಬೆಳಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿವೆ. ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ.
ಕರ್ನಾಟಕದಲ್ಲಿ ಒಟ್ಟು 16,850 ಶಾಲೆಗಳಲ್ಲಿ ಇಂದಿನಿಂದ ಎಸ್ ಎಸ್ ಎಲ್ ಸಿ ತರಗತಿಗಳು ಆರಂಭವಾಗಲಿವೆ.
5,775 ಸರ್ಕಾರಿ ಶಾಲೆಗಳು, 11,075 ಖಾಸಗಿ ಶಾಲೆಗಳಿದ್ದು, 16,850 ಶಾಲೆಯ ಶಿಕ್ಷಕರಿಗೂ ಕೊರೊನಾ ಟೆಸ್ಟ್ ನಡೆಸಲಾಗಿದೆ.
ಶಾಲೆಗಳಲ್ಲಿ 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯವಾಗಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಆನೇಕಲ್ ನ ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ವ್ಯವಸ್ಥೆ ಕೊರೊನಾ ಪ್ರೊಟೊಕಾಲ್ ಅನುಸಾರ ಇರಲಿದೆ.
ಪ್ರತಿ ದಿನ ಬಸ್ ಅನ್ನು ಸ್ಯಾನಿಟೈಸರ್ ಮಾಡುವುದು ಕಡ್ಡಾಯ. ಕ್ಲಾಸ್ ರೂಂ ಸ್ಯಾನಿಟೈಸ್ ಒಂದು ಬೆಂಚ್ ನಿಂದ ಮತ್ತೊಂದು ಬೆಂಚ್ ಗೆ 2 ಅಡಿ ಅಂತರವಿರಬೇಕು.
ಶಾಲೆಗಳು ಆರಂಭವಾದರೂ ಬಿಸಿಯೂಟದ ವ್ಯವಸ್ಥೆ ಇರುವುದಿಲ್ಲ. ಬಿಸಿ ನೀರಿನ ವ್ಯವಸ್ಥೆ ಇರಲಿದೆ.
ಒಂದು ಕ್ಲಾಸ್ ರೂಂನಲ್ಲಿ 15 ಮಕ್ಕಳಿಗೆ ಅವಕಾಶ ನೀಡಲಾಗುವುದು.
PublicNext
01/01/2021 08:30 am