ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಿಮೆ ಅಂಕ ಕೊಟ್ಟರೆಂದು ಶಿಕ್ಷಕರಿಗೇ ಶಿಕ್ಷೆ, ಮರಕ್ಕೆ ಕಟ್ಟಿಹಾಕಿ ಥಳಿಸಿದ ವಿದ್ಯಾರ್ಥಿಗಳು; ವಿಡಿಯೋ ವೈರಲ್‌

ಜಾರ್ಖಂಡ್‌: ಸಾಮಾನ್ಯವಾಗಿ ಶಿಕ್ಷಕರು ಮಕ್ಕಳನ್ನ ದಂಡಿಸೋದನ್ನ ನೀವೆಲ್ಲ ನೋಡೆ ಇರ್ತಿರಾ.. ಆದ್ರೆ ಈ ಸಂಗತಿ ಬೇರೆನೆ ಇದೆ ಅದೇನಂತಿರಾ?.. ಸ್ವತ: ಮಕ್ಕಳೇ ಶಾಲಾ ಶಿಕ್ಷರನ್ನ ಕಠಿಣವಾಗಿ ಶಿಕ್ಷಿಸಿದ ಘಟನೆ ನಡೆದಿದೆ.

ಹೌದು..ಜಾರ್ಖಂಡ್‌ನ ದುಮ್ಕಾದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳನ್ನ ಶಿಕ್ಷಕರು ನೀಡಿದ್ದಾರೆಂದು ಮಕ್ಕಳೇ ಶಿಕ್ಷಕರನ್ನು ಮರಕ್ಕೆ ಕಟ್ಟಿ ಥಳಿಸಿರುವ ಆಘಾತಕಾರಿ ಸಂಗತಿ ಜರುಗಿದೆ.. ಈ ಘಟನೆಯ ಬಗ್ಗೆ ವಿಡಿಯೋಯೊಂದು ಸದ್ಯ ಟ್ವಿಟರ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಾಕ್ಟಿಕಲ್ಸ್‌ ಎಕ್ಸಾಂನ ಅಂಕಗಳನ್ನು ಕಡಿಮೆ ನೀಡಿದ್ದು, ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾರೆಂದು ಶಿಕ್ಷಕರ ಮೇಲೆ ಆಕ್ರೋಶ ವ್ಯಕ್ತಡಿಸಿದ್ದಾರೆಂದು ವರದಿಯಾಗಿದೆ.

ಅಲ್ಲದೇ ಉದ್ದೇಶಪೂರ್ವಕವಾಗಿ ಈ ರೀತಿ ಶಿಕ್ಷಕರು ಅಂಕಗಳನ್ನು ಕಡಿಮೆ ನೀಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.. ಸದ್ಯ ಶಿಕ್ಷಕರನ್ನು ಮರಕ್ಕೆ ಕಟ್ಟಿಹಾಕಿರುವ ದೃಶ್ಯಗಳು ಕಂಡುಬಂದಿದ್ದು, ಶಾಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ತಮ್ಮ ಶಿಕ್ಷಕರಿಗೆ ಉಪನ್ಯಾಸ ನೀಡುತ್ತಿರುವುದನ್ನು ಕಾಣಬಹುದು.

ಹಲವು ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗಿದ್ದ ಕಾರಣ ಅವರಿಗೆ ಪ್ರಾಯೋಗಿಕ ಪರೀಕ್ಷೆಗಳಲ್ಲಿ(Practical exam) ಕಡಿಮೆ ಅಂಕ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಕರನ್ನು ಮರಕ್ಕೆ ಕಟ್ಟಿ ಹಾಕಿ ಶಾಲಾ ವಿದ್ಯಾರ್ಥಿಗಳು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.

Edited By : Abhishek Kamoji
PublicNext

PublicNext

31/08/2022 06:43 pm

Cinque Terre

58.54 K

Cinque Terre

1

ಸಂಬಂಧಿತ ಸುದ್ದಿ