ಲಕ್ನೋ: ಬಾಲಕಿಯೊಬ್ಬಳು ತನ್ನ ಏಳನೇ ವಯಸ್ಸಿನಲ್ಲಿ ಪುಸ್ತಕ ಬಿಡುಗಡೆ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾಳೆ.
ಹೌದು. ಉತ್ತರ ಪ್ರದೇಶದ ಏಳು ವರ್ಷ ವಯಸ್ಸಿನ ಅಭಿಜಿತಾ ಗುಪ್ತಾ ಅವರು ತಮ್ಮ ಮೊದಲ ಪುಸ್ತಕ 'ಹ್ಯಾಪಿನೆಸ್ ಆಲ್ ಅರೌಂಡ್' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದನ್ನು ಇತ್ತೀಚೆಗೆ ಆಕ್ಸ್‌ಫರ್ಡ್ ಬುಕ್‌ಸ್ಟೋರ್‌ಗಳ ಮಕ್ಕಳ ವಿಭಾಗ ಆಕ್ಸ್‌ಫರ್ಡ್ ಜೂನಿಯರ್ ಬಿಡುಗಡೆ ಮಾಡಿದೆ.
ಪದ್ಮಭೂಷಣ ಪುರಸ್ಕೃತ ರಾಷ್ಟ್ರಕವಿ ಮೈತಾಲಿಶರಣ್ ಗುಪ್ತಾ ಮತ್ತು ಸಂತಕವಿ ಸಿಯಾರಾಮ್‌ಶರಣ್ ಅವರ ಮೊಮ್ಮಗಳಾದ ಅಭಿಜಿತಾ ಕಥೆಗಳು ಮತ್ತು ಕವನ ಸಂಕಲನವನ್ನು ಬರೆದಿದ್ದಾರೆ. ಕಥೆಗಳು ಹಾಗೂ ಕವಿತೆಗಳಷ್ಟೇ ಅಲ್ಲದೆ ಪುಸ್ತಕದ ಮುಖಪುಟ ವಿನ್ಯಾಸದ ಕೆಲಸವನ್ನು ಸ್ವತಃ ಅಭಿಜಿತಾ ಮಾಡಿದ್ದಾರೆ. ಅಭಿಜಿತಾ ಎರಡು ವರ್ಷಗಳ ಹಿಂದೆಯೇ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದರು. ಸದ್ಯ ಪುಸ್ತಕ ಬಿಡುಗಡೆ ಮಾಡಿ ಕುಟುಂಬದ ಸಾಹಿತ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಅಭಿಜಿತಾ 2ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಅವರ ಕುಟುಂಬದ ಮೂರನೇ ತಲೆಮಾರಿನ ಬರಹಗಾರ್ತಿಯಾಗಿದ್ದಾರೆ.
PublicNext
20/09/2020 04:46 pm