ಕಲಬುರಗಿ : ಹಿಜಾಬ್ ಗೆ ಸಂಬಂಧಿಸಿದಂತೆ ಮಾ.15 ರಂದು ಹೈಕೋರ್ಟ್ ಆದೇಶ ಹೊರಡಿಸಿದ ಬಳಿಕವೂ ಇಂದು ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ ಎಂದಿದ್ದಕ್ಕೆ ಮರಳಿ ಮನೆಗೆ ವಾಪಸ್ಸಾಗಿರುವ ಘಟನೆ ಕಲಬುರಗಿ ನಗರದ ಜಗತ್ ಬಡಾವಣೆಯ ಸರಕಾರಿ ಪಿಯು ಕಾಲೇಜಿನಲ್ಲಿ ನಡೆದಿದೆ.
ಕೋರ್ಟ್ ಆದೇಶವಾಗಿದೆ ಹಿಜಾಬ್ ತೆಗೆದು ಕ್ಲಾಸ್ ಗೆ ಹೋಗಿ ಎಂದು ಪ್ರಾಂಶುಪಾಲರು ಹೇಳುತ್ತಿದ್ದಂತೆ ಕೋಪಿತರಾದ ವಿದ್ಯಾರ್ಥಿನಿಯರು ಹಿಜಾಬ್ ಬೇಡ ಅಂದ್ರೆ ನಮಗೆ ಶಿಕ್ಷಣವೂ ಬೇಕಾಗಿಲ್ಲ ಎಂದು ಮನೆಗೆ ಮರಳಿದ್ದಾರೆ ಒಟ್ಟು ಹತ್ತರಿಂದ ಹನ್ನೆರಡು ವಿದ್ಯಾರ್ಥಿನಿಯರು ಕಾಲೇಜು ಬಹಿಷ್ಕರಿಸಿದ್ದಾರೆ.
ಹಿಜಾಬ್ ಬೇಡ ಅಂದ್ರೆ ನಮಗೆ ಕಾಲೇಜು ಬೇಡ ಶಿಕ್ಷಣವೂ ಬೇಡ ನಮಗೆ ಹಿಜಾಬ್ ಎಷ್ಟು ಮುಖ್ಯವೋ ಕಾಲೇಜು ಅಷ್ಟೇ ಮುಖ್ಯ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
PublicNext
16/03/2022 12:26 pm