ದಾವಣಗೆರೆ: ರಾಜ್ಯದಲ್ಲಿ ಕೇಸರಿ ಹಾಗೂ ಹಿಜಾಬ್ ಸಂಘರ್ಷ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಬಟ್ಟೆಗಿಂತ ಬದುಕು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಬಟ್ಟೆ ಕಾರಣಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಬದುಕು ಹಾಳಾಗಬಾರದು ಎಂದು ಹೇಳಿದರು.
ಸಾಮರಸ್ಯ ಬದುಕಿಗೆ ಬಸವತತ್ವದ ಸಂದೇಶವಿದೆ. ಅದನ್ನು ಪಾಲನೆ ಮಾಡಬೇಕಾಗಿದೆ. ವಿದ್ಯಾರ್ಥಿ ಸಮೂಹವನ್ನು ಗಮನದಲ್ಲಿ ಇಟ್ಟುಕೊಂಡು ಅವರಲ್ಲಿ ಜಾತಿ ಬೀಜ ಬಿತ್ತುವ ಕೆಲಸ ನಡೆದಿದೆ. ನಾವು ಹಾಕಿಕೊಳ್ಳುವ ಬಟ್ಟೆಗಳು ಕಾವಿ, ಖಾಕಿ ಅಥವಾ ಖಾದಿ ಆಗಿರಬಹುದು. ಈ ಬಟ್ಟೆಗಳಿಗಿಂತ ಬದುಕು ಮುಖ್ಯ ಎಂದು ಪ್ರತಿಪಾದಿಸಿದರು.
ಯಾವುದೇ ಕಾರಣಕ್ಕೂ ಸಂಘರ್ಷ ಬೇಡ. ಸಾಮರಸ್ಯ ವಾತಾವರಣ ಇರಬೇಕು. ಸಾಮರಸ್ಯ ದ ಬದುಕಿನತ್ತ ಪ್ರತಿಯೊಬ್ಬರು ಸಾಗಬೇಕು. ಇದಕ್ಕೆ ಬಸವ ತತ್ವದಲ್ಲಿ ಇರುವ ಸಂದೇಶಗಳನ್ನು ಅರಿಯಬೇಕೆಂದು ತಿಳಿಸಿದರು.
PublicNext
18/02/2022 01:36 pm