ವಿಜಯಪುರ: ಕಳೆದ ಕೆಲವು ದಿನಗಳಿಂದ ವಿಜಯಪುರ ನಗರದ ವಿವಿಧ ಕಾಲೇಜುಗಳಲ್ಲಿ ಸಮವಸ್ತ್ರ ಸಮರ ನಡೆದಿದೆ. ಈ ಸಮವಸ್ತ್ರ ಸಮರ ಈಗ ಸಿಂಧೂರ ಸಮರವಾಗಿ ಮಾರ್ಪಟ್ಟಿದೆ. ಇಂದು ಸಿಂಧೂರ ಹಚ್ಚಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಗಂಗಾಧರ ಬಡಿಗೇರ್ ಎಂಬ ವಿದ್ಯಾರ್ಥಿ ಹಣೆಗೆ ಕುಂಕುಮ ಹಚ್ಚಿಕೊಂಡು ಕಾಲೇಜಿಗೆ ಬಂದಿದ್ದಾನೆ. ಈ ವೇಳೆ ಆತನನ್ನು ತಡೆದ ಕಾಲೇಜು ಆಡಳಿತ ಮಂಡಳಿ ಕುಂಕುಮ ಧರಿಸಿದವರಿಗೆ ಪ್ರವೇಶವಿಲ್ಲ ಎಂದಿದ್ದಾರೆ. ಈ ವೇಳೆ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ಹಾಗೂ ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ನಡುವೆ ಮಾತಿನ ಚಕಮಕಿ ನಡೆದಿದೆ. ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಕೂಡದೆಂದು ಕೋರ್ಟ್ ಹೇಳಿದೆ. ಆದ್ರೆ ಕುಂಕುಮ ಧರಿಸಬಾರದೆಂದು ಹೇಳಿಲ್ಲ ಎಂಬುದು ವಿದ್ಯಾರ್ಥಿಯ ವಾದವಾಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ವಿದ್ಯಾರ್ಥಿಯ ಮನವೊಲಿಸಿ ಕಾಲೇಜಿನ ಆವರಣದೊಳಗೆ ಕಳುಹಿಸಿದ್ದಾರೆ.
PublicNext
18/02/2022 01:25 pm