ಹಾಸನ: ಹಾಸನ ಜಿಲ್ಲೆ ಬೇಲೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 40 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಿದ್ಯಾರ್ಥಿಗಳು ಹಿಜಾಬ್ ತೆಗೆಯದೆ ಶಾಲೆ ಒಳಗೆ ಬಿಡಲ್ಲ ಎಂದ ಶಿಕ್ಷಕರ ಮಾತಿಗೆ ಕಿವಿಗೊಡದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಪಾಠ ಕೇಳಲು ಬಿಡಿ ಎಂದು ಪಟ್ಟು ಹಿಡಿದಿದ್ದರು.
ಶಾಲಾ ಮೈದಾನದಲ್ಲೇ ಕುಳಿತು ಹಿಜಾಬ್ ಪರ ಹೋರಾಟ ನಡೆಸಿದ ವಿದ್ಯಾರ್ಥಿಗಳು ಕೋರ್ಟ್ ತೀರ್ಪು ಏನೇ ಬಂದರು ನಾವು ಹಿಜಾಬ್ ತೆಗೆಯಲ್ಲ. ಹಿಜಾಬ್ ಧರಿಸಿಯೇ ಹೋಗಿ ಎಂದು ನಮಗೆ ನಮ್ಮ ಪೋಷಕರು ಹೇಳಿಕೊಟ್ಟಿಲ್ಲ ಇದು ನಮ್ಮದೇ ಅಭಿಪ್ರಾಯ ಎಂದಿದ್ದಾರೆ.
ಇಂದು ಹಿಜಾಬ್ ತಗಿರಿ ಅಂತಾರೆ ನಾಳೆ ಇನ್ನೊಂದು ಹೇಳ್ತಾರೆ ಇದನ್ನೇಲ್ಲಾ ನಾವು ಕೇಳಲ್ಲ ಇನ್ನು ಮೂರು ದಿನ ಕಳೆದರೆ ಪೂರ್ವ ಸಿದ್ದತಾ ಪರೀಕ್ಷೆ ಇದೆ. ನಾವು ಓದಬೇಕು ನಮಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಶಾಲಾ ಉಪ ಪ್ರಾಂಶುಪಾಲರು, ಶಿಕ್ಷಕರು ಎಷ್ಟೇ ತಿಳಿ ಹೇಳಿದರೂ ಹಠ ಬಿಡದ ವಿದ್ಯಾರ್ಥಿಗಳು ಮನೆಗೆ ವಾಪಸ್ಸಾಗಿದ್ದಾರೆ.
PublicNext
15/02/2022 05:47 pm