ಕೋಟ: ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಎಂ.ಕಾಂ ವಿದ್ಯಾರ್ಥಿನಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಸ್ವಾತಿ ಮಂಗಳೂರುವಿಶ್ವವಿದ್ಯಾನಿಲಯದಲ್ಲಿ 3ನೇ ರ‍್ಯಾಂಕ್ ಪಡೆದಿದ್ದಾಳೆ.ಈ ಹಿನ್ನೆಲೆಯಲ್ಲಿ ಮಿಲಾಗ್ರೀಸ್ ಕಾಲೇಜಿನ ಅಧ್ಯಾಪಕ ವೃಂದ ಸಚಿವರ ಮನೆಗೇ ತೆರಳಿ ಅಭಿನಂದಿಸಿದ್ದು ವಿಶೇಷವಾಗಿತ್ತು. ಕೋಟದ ಅವರ ಮನೆಯಲ್ಲಿ ತಾಯಿ ಶಾಂತಾ ಶ್ರೀನಿವಾಸ ಪೂಜಾರಿಯವರ ಸಮಕ್ಷಮ ರ್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ವಿಸ್ಸೆಂಟ್ ಆಳ್ವ ಈ ಸಂದರ್ಭ ಮಾತನಾಡಿ , ಸಚಿವರ ಮಗಳು ಎನ್ನುವ ಯಾವುದೇ ಅಹಂ ಇಲ್ಲದ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಈಕೆ. ಶಿಸ್ತು ಮತ್ತು ಸರಳತೆಯಲ್ಲಿ ತಂದೆಯಂತೆಮಾದರಿಯಾಗಿದ್ದಾಳೆ.ಈಗ ರ‍್ಯಾಂಕ್ ಪಡೆಯುವ ಮೂಲಕ ನಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ ಎಂದರು.
ಅಭಿನಂದನೆ ಸ್ವೀಕರಿಸಿದ ಸ್ವಾತಿ , ಕಾಲೇಜಿನ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದಳು.
PublicNext
15/04/2022 12:25 pm