ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಮ್ಮಕ್ಕ, ಭೈರಪ್ಪ, ಚನ್ನವೀರ ಕಣವಿ ಸೇರಿ ಐವರು ಸಾಧಕರಿಗೆ ಕರ್ನಾಟಕ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್

ಬೆಂಗಳೂರು: ಪರಿಸರವಾದಿ, ಸಾಮಾಜಿಕ ಕಾರ್ಯಕರ್ತೆ ಸಾಲು ಮರದ ತಿಮ್ಮಕ್ಕ, ಚೆಂಬಳಕಿನ ಕವಿ ಚನ್ನವೀರ ಕಣವಿ ಸೇರಿದಂತೆ ಐವರು ಸಾಧಕರಿಗೆ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿರ್ಧರಿಸಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವ ಸೆಪ್ಟೆಂಬರ್ 23ರಂದು ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ವರ್ಚುವಲ್ ಮೋಡ್‍ನಲ್ಲಿ ನಿಗದಿಪಡಿಸಲಾಗಿರುವ ಸಮಾರಂಭದಲ್ಲಿ ವಿಶ್ವವಿದ್ಯಾಲಯ ನುದಾನ ಆಯೋಗ (ಯುಜಿಸಿ) ದ ಅಧ್ಯಕ್ಷ ಪ್ರೊ. ಡಿ ಪಿ ಸಿಂಗ್ ಮುಖ್ಯಅತಿಥಿಯಾಗಿ ಪಾಲ್ಗೊಂಡು, ಆನ್‍ಲೈನ್ ಮೂಲಕ ಘಟಿಕೊತ್ಸವ ಭಾಷಣ ಮಾಡಲಿದ್ದಾರೆ ಎಂದು ಸಿಯುಕೆ ಕುಲಪತಿ ಎಚ್.ಎಂ.ಮಹೇಶ್ವರಯ್ಯ ತಿಳಿಸಿದ್ದಾರೆ.

ಐದನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ ಐವರು ಸಾಧಕರಾದ ಸಾಲು ಮರದ ತಿಮ್ಮಕ್ಕ, ಜಾನಪದ ಲೇಖಕ ಮತ್ತು ಬರಹಗಾರ ಎಂ.ಜಿ.ಬಿರಾದಾರ್, ಕಾದಂಬರಿಕಾರ, ಸಂಶೋಧಕ ಎಸ್‍ಎಲ್ ಭೈರಪ್ಪ, ಕವಿ ಚನ್ನವೀರ ಕಣವಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಕೆ. ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಜೊತೆಗೆ ಕರ್ನಾಟಕ ಕೇಂದ್ರೀಯ ವಿವಿ ವಿಶ್ವವಿದ್ಯಾಲಯವು 38 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 25 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಮತ್ತು ಅರ್ಹ ಅಭ್ಯರ್ಥಿಗಳಿಗೆ ಒಟ್ಟು 665 ಪದವಿಗಳನ್ನು ಆನ್‍ಲೈನ್ ಮೂಲಕ ನೀಡುತ್ತಿದೆ ಎಂದು ಕುಲಪತಿ ಮಹೇಶ್ವರಯ್ಯ ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

21/09/2020 10:17 pm

Cinque Terre

91.57 K

Cinque Terre

0