ತುಮಕೂರು- ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ತುಮಕೂರಿನ ಮರಳೂರು ದಿಣ್ಣೆಯ ಮನೆಯೊಂದರ ಮೇಲೆ ಭಾನುವಾರ ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ ಎನ್‌ಐಎ ಅಧಿಕಾರಿಗಳು ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ಮಾಜಿ ಶಾಸಕ ರಫೀಕ್ ಅಹಮದ್ ಒಡೆತನಕ್ಕೆ ಸೇರಿದ ಹೆಚ್.ಎಂ.ಎಸ್ ಯುನಾನಿ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್ ವಿದ್ಯಾರ್ಥಿಯನ್ನು ಎನ್‌ಐಏ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ಮರಳೂರು ದಿಣ್ಣೆಯಲ್ಲಿ ಈತ ವಾಸಿಸುತ್ತಿದ್ದ ಎನ್ನಲಾಗಿದೆ. ಮಾಜಿ ಶಾಸಕ ರಫೀಕ್ ಅಹಮದ್ ಒಡೆತನದಲ್ಲಿರುವ ಈ ಕಾಲೇಜನ್ನು ಮುಂಬೈ ಮೂಲದವರು ಬಾಡಿಗೆ ಪಡೆದು ನಡೆಸುತ್ತಿದ್ದಾರೆ.
ಆದರೆ, ಈ ಬಗ್ಗೆ ಮಾಜಿ ಶಾಸಕ ರಫೀಕ್ ಅಹಮದ್ ವೀಡಿಯೋ ಮೂಲಕವೇ ಸ್ಪಷ್ಟಿಕರಣ ನೀಡಿದ್ದು ನಮ್ಮ
ಹೆಚ್.ಎಂ.ಎಸ್ ವಿದ್ಯಾ ಸಂಸ್ಥೆಗೂ ಯುನಾನಿ ಕಾಲೇಜಿಗೂ ಎಲ್ಲೂ ಸಂಬಂಧ ಇಲ್ಲ. ಕಳೆದ 15 ವರ್ಷದಿಂದಲೂ ಈ ಒಂದು ಕಾಲೇಜ್ ಅನ್ನ ಮುಂಬೈ ಮೂಲದವರು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮಾಜಿ ಶಾಸಕ ರಫೀಕ್ ಅಹಮದ್ ಹೇಳಿಕೊಂಡಿದ್ದಾರೆ.
PublicNext
31/07/2022 03:41 pm