ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು ವಿವಿಯ ನೂತನ ಕುಲಪತಿ ಪದಗ್ರಹಣ

ತುಮಕೂರು:- ತುಮಕೂರು ವಿಶ್ವವಿದ್ಯಾನಿಲಯದ ನೂತನ ಉಪ ಕುಲಪತಿಗಳಾಗಿ ಪ್ರೋ ವೆಂಕಟೇಶ್ವರಲು ಬುಧವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಮೂಲತಹಃ ಕಲಬುರ್ಗಿ ದೇವರಾಗಿದ್ದು 30 ವರ್ಷಗಳ ಕಾಲ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ದೂರಶಿಕ್ಷಣದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ, ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಈ ಹಿಂದೆ ತುಮಕೂರು ವಿವಿಯ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಮಾರ್ಚ್23ರಂದು ಈ ಹಿಂದೆ ಇದ್ದ ಕುಲಪತಿ ಪ್ರೊ. ವೈಎಸ್ ಸಿದ್ದನಗೌಡ ನಿವೃತ್ತಿ ಬಳಿಕ ಕುಲಪತಿ ನೇಮಕವಾಗಿರಲಿಲ್ಲ, ಪ್ರಭಾರ ಕುಲಪತಿಗಳಾಗಿ ಪ್ರೊ. ಕೇಶವ ಕಾರ್ಯನಿರ್ವಹಿಸುತ್ತಿದ್ದರು. ಸತತ ನಾಲ್ಕು ತಿಂಗಳುಗಳ ನಂತರ ಈಗ ತುಮಕೂರು ವಿವಿಗೆ ಕಾಯಂ ಕುಲಪತಿ ಭಾಗ್ಯ ಒಲಿದು ಬಂದಿದ್ದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

20/07/2022 10:12 pm

Cinque Terre

24.38 K

Cinque Terre

0

ಸಂಬಂಧಿತ ಸುದ್ದಿ