ಹಾವೇರಿ: ಜಿಲ್ಲೆಯ ಕೋಡಬಾಳ ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯವಿರದ ಹಿನ್ನೆಲೆ ಶಾಲಾ,ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಬಸ್ ನಿಲ್ದಾಣದ ಎದುರುಗಡೆ ಚಾಪೆ ಹಾಸಿಕೊಂಡು ವಿನೂತನ ಪ್ರತಿಭಟನೆ ಮಾಡಿದರು. ಸರಿಯಾಗಿ ಬಸ್ ಇಲ್ಲದ ಕಾರಣ ಪ್ರತಿನಿತ್ಯ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಒಂದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕೋಡಬಾಳದಿಂದ ಅಕ್ಕೂರಿಗೆ ಶಾಲೆಗೆ ತೆರಳೋ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯದ ಕೊರತೆ ಇದ್ದು ಪ್ರತಿ ದಿನ ಹೈಸ್ಕೂಲ್ ಗೆ ಹೋಗಲು 9ಗಂಟೆಗೆ ಬಸ್ ಅವಶ್ಯಕತೆ ಇದೆ.
ಆದ್ರೆ ಕೋಡಬಾಳ ಗ್ರಾಮಕ್ಕೆ ಪ್ರತಿದಿನ ಬಸ್ 11.35ಕ್ಕೆ ಬಸ್ ಬರುತ್ತಿದೆ. ಇದ್ರಿಂದ ಕಾಲೇಜು, ಶಾಲೆಗೆ ಹೋಗುವಷ್ಟರಲ್ಲಿ ಎರಡು ಕ್ಲಾಸ್ ಮುಗಿದಿರುತ್ತವೆ. ಕೋಡಬಾಳದಿಂದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ನಲ್ಲಿ ಶಾಲೆಗೆ ಪ್ರಯಾಣಿಸುತ್ತಾರೆ. ಈ ಕುರಿತು ಒಂದು ವರ್ಷದಿಂದ ಬಸ್ ಗಾಗಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ. ಯಾವ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
PublicNext
12/07/2022 02:26 pm