ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಹೈಕೋರ್ಟ್ ಗೆ ವರದಿ ಸಲ್ಲಿಕೆ

ಬೆಂಗಳೂರು : ರಾಜ್ಯದಲ್ಲಿ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗೆ ಉಳಿದಿದ್ದಾರೆ.ರಾಜ್ಯ ಸರಕಾರ ನಡೆಸಿದ ಸಮೀಕ್ಷಾ ವರದಿಯಲ್ಲಿ ಈ ವಿಷಯ ದೃಢಪಟ್ಟಿದೆ. 2020ರಲ್ಲಿ ಕೊರೊನಾದಿಂದ ಶಾಲೆ, ಅಂಗನವಾಡಿಗಳು ಮುಚ್ಚಿದ್ದ ಕಾರಣ ಹೀಗಾಗಿದೆ ಎನ್ನುತ್ತದೆ ಈ ಸಮೀಕ್ಷಾ ವರದಿ.

ಕಡ್ಡಾಯ ಶಿಕ್ಷಣ ಕಾಯ್ದೆಯ ಸಮರ್ಪಕ ಅನುಷ್ಠಾನ ಹಿನ್ನೆಲೆಯಲ್ಲಿ ಹೈಕೋರ್ಟ್ 2013ರಲ್ಲಿ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ(6-14 ವರ್ಷಗಳು) 15,388, ಶಾಲೆಗೆ ಎಂದಿಗೂ ದಾಖಲಾಗದ ಮಕ್ಕಳ ಸಂಖ್ಯೆ(6-14 ವರ್ಷಗಳು) 10,018, ಅಂಗನವಾಡಿಗೆ ದಾಖಲಾಗದ ಮಕ್ಕಳ ಸಂಖ್ಯೆ(0-3) 4,54,238, ಅಂಗನವಾಡಿಗೆ ದಾಖಲಾಗದ ಮಕ್ಕಳ ಸಂಖ್ಯೆ(4-6) 5,33,206 ಎಂದು ರಾಜ್ಯ ಸರಕಾರ ಹೈಕೋರ್ಟ್ ನ್ಯಾಯಪೀಠಕ್ಕೆ ವರದಿಯನ್ನು ಸಲ್ಲಿಸಿದೆ.

Edited By : Nirmala Aralikatti
PublicNext

PublicNext

07/07/2022 02:10 pm

Cinque Terre

50.88 K

Cinque Terre

4