ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ನಿನ್ನೆಯಿಂದ ಆರಂಭವಾಗಿದೆ. ಮೊದಲ ದಿನ ಪರೀಕ್ಷೆ ಬರೆದ ಶೇ. 84.22 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಪೂರಕ ಪರೀಕ್ಷೆ ಆರಂಭದ ಮೊದಲ ದಿನ ವಿಜ್ಞಾನ ವಿಷಯದ ಪರೀಕ್ಷೆ ನಡೆದಿದೆ. ಇದಕ್ಕೆ 36, 265 ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದ 423 ಕೇಂದ್ರ ಗಳಲ್ಲಿ ಪರೀಕ್ಷೆ ನಡೆದಿದ್ದು, 28,184 ಪುನರಾವರ್ತಿತ ಹಾಗೂ 14878 ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ಸೇರಿ ಒಟ್ಟು 43,062 ವಿದ್ಯಾರ್ಥಿ ಗಳು ಪರೀಕ್ಷೆ ಗೆ ನೋಂದಾಯಿ ಸಿದ್ದರು.
ಅನಾರೋಗ್ಯ ಕಾರಣ ಹಿನ್ನೆಲೆಯಲ್ಲಿ 15 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ.
PublicNext
28/06/2022 11:23 am