ಪ್ರಸಕ್ತ ಸಾಲಿನ ಇಂಜನೀಯರಿಂಗ್, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಜೂನ್ 16, 17 ಹಾಗೂ 18ರಂದು ಸುಗಮವಾಗಿ ನಡೆಸಿದೆ. ಅಷ್ಟೇ ಅಲ್ಲದೆ ಜೂನ್ 22ರಂದು ತಾತ್ಕಾಲಿಕ ಕೀ ಉತ್ತರವನ್ನು ಸಹ ಪ್ರಕಟ ಮಾಡಿದೆ. ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ -2022 ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನ ನೀಡಿದೆ.
ಯುಜಿಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು, ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಯಾವುದಾದರು ತಪ್ಪುಗಳನ್ನು ಮಾಡಿದ್ದರೆ, ಅವುಗಳನ್ನು ತಿದ್ದುಪಡೆ ಮಾಡಿಕೊಳ್ಳಲು ಅವಕಾಶ ನೀಡಿ ಪ್ರಕಟಣೆಯನ್ನು ಹೊರಡಿಸಿದೆ. ಯುಜಿಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು, ಆನ್‌ಲೈನ್ ಮೂಲಕ ತಿದ್ದುಪಡೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಪ್ರಕಟಣೆಯಲ್ಲಿ ಸಿಇಟಿ-2022ಕ್ಕೆ ಆನ್‌ಲೈನ್ ಮೂಲಕ ದಾಖಲಿಸಿರುವ ಮಾಹಿತಿ/ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅಂತಿಮ ಅವಕಾಶ ನೀಡಲಾಗಿದೆ. ದಿನಾಂಕ 24-06-2022 ರಿಂದ 28-06-2022ರವರೆಗೂ ಅವಕಾಶವಿದ್ದು ಅಭ್ಯರ್ಥಿಗಳು, ಕೆಇಎ ನ ಅಧಿಕೃತ ವೆಬ್‌ಸೈಟ್ cetonline.karnataka.gov.inಗೆ ಭೇಟಿ ನೀಡಿ ತಿದ್ದುಪಡೆ ಮಾಡಿಕೊಳ್ಳಬಹುದಾಗಿದೆ.
ದಿನಾಂಕ 16-06-2022 ಮತ್ತು 17-06-2022 ರಂದು ಸಿಇಟಿ-2022 ರ ಪರೀಕ್ಷೆಯನ್ನು ಮತ್ತು ದಿನಾಂಕ 18-06-2022 ರಂದು ಹೊರನಾಡು ಮತ್ತು ಗಣಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ನಿಯಮನುಸಾರ ಮುಂದಿನ ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಫಲಿತಾಂಶವನ್ನು ಪ್ರಕಟಿಸುವ ಮೊದಲು ಕೊನೆಯ ಬಾರಿಗೆ ಸಿಇಟಿ-2022 ಕ್ಕಾಗಿ ಆನ್‌ಲೈನ್ ಮೂಲಕ ದಾಖಲಿಸಿರುವ ಮಾಹಿತಿ ತಿದ್ದುಪಡಿ ಮಾಡಿಕೊಳ್ಳಲು ಅಂತಿಮ ಅವಕಾಶ ನೀಡಲಾಗಿದೆ.
ಸಿಇಟಿ-2022 ರ ಫಲಿತಾಂಶ ಘೋಷಣೆಯಾದ ನಂತರ ಯಾವುದೇ ಸಂದರ್ಭದಲ್ಲಿಯೂ ಅರ್ಜಿಯಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಅಥವಾ ಮೀಸಲಾತಿಯನ್ನು ಕ್ಲೇಮ್ ಮಾಡಲು ಅವಕಾಶವಿರುವುದಿಲ್ಲ. ಹಾಗೂ ಅರ್ಜಿಯಲ್ಲಿ ಮಾಹಿತಿಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡುವಂತೆ ಸಲ್ಲಿಸುವ ಮನವಿಗಳನ್ನು ಪುರಸ್ಕರಿಸುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಮತ್ತು ಪೋಷಕರು ಅರ್ಜಿಗಳಲ್ಲಿ ತಾವು ಮಾಡಿರುವ ಕ್ಲೇಮ್‌ಗಳನ್ನು/ ಮಾಹಿತಿಯನ್ನು ತಪ್ಪದೇ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಲು ಸೂಚಿಸಿದ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, 3ಎ, 3ಬಿ, 2ಎ, 2ಬಿ, ಪ್ರವರ್ಗ-1 ಕ್ಕೆ ಅರ್ಹತೆ ಇದ್ದು, ಅರ್ಜಿಯಲ್ಲಿ ತಾವು ಸರಿಯಾಗಿ ತಮ್ಮ ತಮ್ಮ ವರ್ಗಗಳನ್ನು ನಮೂದಿಸದಿದ್ದಲ್ಲಿ ದಾಖಲಾತಿ ಪರಿಶೀಲನೆಗೆ ನಿಗದಿತ ಪ್ರಮಾಣ ಪತ್ರ ಹಾಜರು ಪಡಿಸಿದರು ಸಹ ತಮಗೆ ಮೀಸಲಾತಿ ಪಡೆಯಲು ಮಾನ್ಯ ಮಾಡುವುದಿಲ್ಲ ಮತ್ತು ಅರ್ಹತೆ ಹೊಂದುವುದಿಲ್ಲ. ಅಭ್ಯರ್ಥಿಗಳು ತಾವು ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರ/ ಆದಾಯದ ಪ್ರಮಾಣ ಪತ್ರದಲ್ಲಿ ನಮೂದಿತವಾಗಿರುವ ವರ್ಗವನ್ನು ಪರಿಶೀಲಿಸಿಕೊಳ್ಳಿ ಹಾಗೂ ತಾವು ಅರ್ಜಿಯಲ್ಲಿ ನಮೂದಿಸಿರುವ ವರ್ಗಕ್ಕೆ ತಾಳೆ ಮಾಡಿ, ಅರ್ಜಿಯಲ್ಲಿ ನಮೂದಿಸಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಅರ್ಜಿಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಅಂಕಣದಲ್ಲಿ NO ಎಂದು ನಮೂದಿಸಿದ್ದಲ್ಲಿ ತಮಗೆ ಕನ್ನಡ ಮಾಧ್ಯಮದ ಮೀಸಲಾತಿ ಪಡೆಯಲು ಅರ್ಹತೆ ಇರುವುದಿಲ್ಲ.
ಒಂದರಿಂದ ಹತ್ತನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿ, ಅರ್ಜಿಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ಅಂಕಣದಲ್ಲಿ NO ಎಂದು ನಮೂದಿಸಿದ್ದಲ್ಲಿ ತಮಗೆ ಕನ್ನಡ ಮಾಧ್ಯಮದ ಮೀಸಲಾತಿ ಪಡೆಯಲು ಅರ್ಹತೆ ಇರುವುದಿಲ್ಲ.
PublicNext
24/06/2022 04:49 pm