ಬೆಂಗಳೂರು: ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮತ್ತೊಮ್ಮೆ ಅವಕಾಶ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 'ಅಭ್ಯರ್ಥಿಗಳ ಹಿತದೃಷ್ಟಿಯನ್ನು ಪರಿಗಣಿಸಿ ಸಿಇಟಿ-2022ಕ್ಕೆ ಅರ್ಜಿ ಸಲ್ಲಿಸಲು ಪ್ರಾಧಿಕಾರವು ಸುಮಾರು ಏಳು ಬಾರಿ ಅವಕಾಶವನ್ನು ಕಲ್ಪಿಸಿತ್ತು. ಆದಾಗ್ಯೂ ಕೆಲವು ಅಭ್ಯರ್ಥಿಗಳು ಪೂರ್ಣವಾಗಿ ಅರ್ಜಿ ತುಂಬಿರುವುದಿಲ್ಲ ಅಥವಾ ಫೋಟೋ ಅಪ್‌ಲೋಡ್ ಮಾಡಿರುವುದಿಲ್ಲ ಅಥವಾ ಪ್ರಾಯೋಗಿಕವಾಗಿ (1 ರೂ.) ಅರ್ಜಿ ಸಲ್ಲಿಸಿ ಸಿಇಟಿ-2022ಕ್ಕೆ ಅರ್ಜಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಇಲ್ಲಿಯವರೆಗೆ ರ್ಜಿ ಸಲ್ಲಿಸದೇ ಇರುವ ಅಥವಾ ಫೋಟೋ ಅಪಲೋಡ್ ಮಾಡದೇ ಇರುವ ಅಥವಾ ಅರ್ಜಿ ಸಲ್ಲಿಸುವಿಕೆಯನ್ನು ಸಂಪೂರ್ಣವಾಗಿ ಭರ್ತಿ ಮಾಡದಿರುವವರಿಗಾಗಿ ಕೊನೆಯ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ಅವಕಾಶವನ್ನು ನೀಡಲಾಗಿದೆ' ಎಂದು ಮಾಹಿತಿ ನೀಡಿದೆ.
ಜೂನ್ 6ರ ಸಂಜೆ 4 ಗಂಟೆಯಿಂದ ಜೂನ್ 13ರ ಸಂಜೆ 4 ಗಂಟೆಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪೋರ್ಟಲ್ ಅನ್ನು ತೆಗೆಯಲಾಗುವು. ಸಿಇಟಿ ಕೇಂದ್ರ ನಿಗದಿಪಡಿಸುವುದು ಪ್ರಾಧಿಕಾರದ ವಿವೇಚನೆಗೆ ಒಳಪಟ್ಟಿರುತ್ತದೆ. ಕರ್ನಾಟಕದಲ್ಲಿನ ಯಾವುದೇ ಕೇಂದ್ರಗಳು ದೊರೆಯಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
PublicNext
10/06/2022 11:38 am