ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು; ಪಿಯು ಉಪನ್ಯಾಸಕರಿಂದ ಹಿಂಬಾಕಿ ವಸೂಲಿಗೆ ಮುಂದಾದ ಸರ್ಕಾರ

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ಮತ್ತು ಬಡ್ತಿ ಕಡಿತಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಇದರಿಂದ 500 ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಆತಂಕಕ್ಕೀಡಾಗಿದ್ದಾರೆ.

ರಾಜ್ಯದಲ್ಲಿ ಇರುವ 1,234 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2013 ರಲ್ಲಿ ನೇಮಕವಾಗಿ ಬಿಇಡಿ ಪದವಿ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ವೇತನ ಹಾಗೂ ಬಡ್ತಿ ಕಡಿತ ಆತಂಕ ತಂದುವೊಡ್ಡಿದೆ.

ಅಲ್ಲದೆ ಹೆಚ್ಚುವರಿ ವಸೂಲಿ ಮಾಡಿ ಉಪನ್ಯಾಸಕರಿಗೆ ವೇತನ ನೀಡುವಂತೆ ಸರ್ಕಾರ ಪ್ರಿನ್ಸಿಪಾಲರಿಗೆ ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಆದೇಶ ಪಾಲಿಸದೇ ಇದ್ದಲ್ಲಿ ನಿಯಮಬಾಹಿರವಾಗಿ ವೇತನ, ಬಡ್ತಿ ಮಂಜೂರು ಮಾಡಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಮಾಡಿದ್ದಾರೆಂದು ಶಿಸ್ತು ಕ್ರಮ ಜರುಗಿಸಬೇಕಾಗುತ್ತೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಅಂತ ಹೆಸರು ಹೇಳಲು ಇಚ್ಚಿಸದ ಕಾಲೇಜು ಪ್ರಿನ್ಸಿಪಾಲ್ ತಿಳಿಸಿದ್ದಾರೆ. ಇನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಅಂತಾರೆ

Edited By : Somashekar
PublicNext

PublicNext

09/06/2022 12:52 pm

Cinque Terre

64.85 K

Cinque Terre

1

ಸಂಬಂಧಿತ ಸುದ್ದಿ