ಚಾಮರಾಜನಗರ: ಶಾಲೆಯ ಹೆಸರು ಬದಲಿಸಲೇಬೇಕು. ಇಲ್ಲದೇ ಇದ್ದರೆ ನಾವು ಶಾಲೆಗೆ ಬರೋದೇ ಇಲ್ಲ. ಹೀಗಂತ ಇಲ್ಲಿಯ ಗ್ರಾಮವೊಂದರ ಮಕ್ಕಳು ಪಟ್ಟು ಹಿಡಿದು ಕುಳಿತಿದ್ದಾರೆ. ಆಶ್ಚರ್ಯ ಎನಿಸಿದರೂ ಇದು ಸತ್ಯ.
ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿಯೇ ಈ ಶಾಲೆ ಇದೆ. ಈ ಶಾಲೆಯ ಹೆಸರನ್ನ "ಮೈಸೂರಪ್ಪನದೊಡ್ಡಿ" ಅಂತಲೇ ಈ ಶಾಲೆಗೆ ಹೆಸರಿಡಲಾಗಿದೆ. ಇದೇ ನೋಡಿ ಈಗ ಚೇಂಜ್ ಆಗಲೇ ಬೇಕಾದ ಹೆಸರು.
ಹೊಸದೊಡ್ಡಿಯಲ್ಲಿರೋ ಈ ಶಾಲೆಗೆ ಮೈಸೂರಪ್ಪನದೊಡ್ಡಿ ಅಂತಲೇ ಯಾಕೆ ಹೆಸರಿದೆ ಅನ್ನೋ ಪ್ರಶ್ನೆ ಏಳುತ್ತದೆ. ನಿಜ, ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಹಿಂದೆ ಮೈಸೂರಪ್ಪನದೊಡ್ಡಿಯಲ್ಲಿಯೇ ಇತ್ತು. ಆಗ ಅಲ್ಲಿಯ ಈ ಶಾಲೆಗೆ ಮಕ್ಕಳು ಬರಲೇ ಇಲ್ಲ. ಈ ಕಾರಣಕ್ಕೇನೆ ಶಾಲೆಯನ್ನ ಹೊಸದೊಡ್ಡಿಗೆ ಸ್ಥಳಾಂತರಿಸಿದ್ದಾರೆ.
ವಿಶೇಷವೆಂದ್ರೆ ಕಳೆದ 40 ವರ್ಷದಿಂದಲೂ ಈ ಶಾಲೆಗೆ ಮೈಸೂರಪ್ಪದೊಡ್ಡಿ ಶಾಲೆ ಅಂತಲೇ ಕರೆಯಲಾಗುತ್ತಿದೆ. ಆದರೆ, ಈಗ ಹೆಸರು ಬದಲಿಸಬೇಕು ಅಂತ ಪೋಷಕರು ಮತ್ತು ಮಕ್ಕಳು ಪಟ್ಟು ಹಿಡಿದಿದ್ದಾರೆ. ಇನ್ನೂ ಒಂದು ವಿಷಯವೆಂದ್ರೆ ಒಂದು ಬಣ ಹೆಸರು ಬದಲಿಸಿದರೇ ಕೋರ್ಟ್ ಗೆ ಹೋಗ್ತೀವಿ ಅಂತಿದೆ. ಮತ್ತೊಂದು ಬಣ ಹೆಸರು ಬದಲಿಸಲೇಬೇಕು ಅಂತಲೆ ಪಟ್ಟು ಹಿಡಿದಿದೆ. ಇದು ಈಗ ಹನೂರಿನ ಬಿಇಒ ಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ.
PublicNext
08/06/2022 09:44 pm