ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಕರ ನೇಮಕಾತಿ ಪರೀಕ್ಷೆ ಕೀ ಉತ್ತರ ಪ್ರಕಟ

ಬೆಂಗಳೂರು : ಪದವೀಧರ ಪ್ರಾಥ ಮಿಕ ಶಿಕ್ಷಕರ (6_ರಿಂದ 8) ಕಾತಿ ಪರೀಕ್ಷೆ ಕೀ ಉತ್ತರಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮೇ 21 ಹಾಗೂ 22 ರಂದು ನಡೆದಿದ್ದ 15, 000 ಸರ್ಕಾರಿ ಪ್ರಾಥಮಿಕ‌ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರವನ್ನು ಪ್ರಕಟಿಸಲಾಗಿದೆ.

ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ -1 ಮತ್ತು ಪತ್ರಿಕೆ- 2ರ ಕೀ ಉತ್ತರಗಳನ್ನು ಇಲಾಖೆ ವೆಬ್ ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಪರೀಕ್ಷೆಯ ಕೀ ಉತ್ತರಗಳಿಗೇ ಆಕ್ಷೇಪಣೆಗಳನ್ನು ಜೂನ್ 3 ರಿಂದ 10 ರೊಳಗಾಗಿ ಸಲ್ಲಿಸುವಂತೆ ತಿಳಿಸಿದೆ.

Edited By : Nirmala Aralikatti
PublicNext

PublicNext

04/06/2022 10:16 am

Cinque Terre

34.51 K

Cinque Terre

0