ಬೆಂಗಳೂರು: ಟಿಪ್ಪು ವಿವಾದಿಂದ ಆರಂಭವಾದ ಪಠ್ಯಪುಸ್ತಕ ವಿವಾದ ಇದೀಗ, ಬಸವೇಶ್ವರ, ಕುವೆಂಪು, ಭಗತ್ ಸಿಂಗ್, ಹೆಡ್ಗೆವಾರ್, ಕೊನೆಗೆ ಚಕ್ರವರ್ತಿ ಸೂಲಿಬೆಲೆವರೆಗೂ ಬಂದು ನಿಂತಿದೆ. ದಿನಕ್ಕೊಂದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಪಠ್ಯ ಪುಸ್ತಕ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ಎಲ್ಲ ವಿಚಾರಗಳಿಗೂ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವರು ಸದ್ಯ ಬುಗೆಲೆದಿರುವ ಎಲ್ಲಾ ವಿವಾದಕ್ಕೂ ತೆರೆ ಎಳೆಯಲು ಮುಂದಾಗಿದ್ದಾರೆ.
ಕಳೆದ ಒಂದು ವಾರದಿಂದ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತಿದ್ದು ವಿರೋಧಕ್ಕೆ ಕಾರಣವಾಗ್ತಿದೆ. ಟಿಪ್ಪು ಭಗತ್ ಸಿಂಗ್ ಹೆಡ್ಗೆವಾರ್, ಬಸವೇಶ್ವರ, ಕುವೆಂಪು, ಸೂಲಿಬೆಲೆ ಪಾಠ ಸೇರ್ಪಡೆ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. 10 ನೇ ತರಗತಿ ಪಠ್ಯದಲ್ಲಿ ನೂತನ ಪರಿಷ್ಕರಣಾ ಸಮಿತಿ ಸಾಕಷ್ಟು ಬದಾವಣೆ ಮಾಡಿರುವುದೆ ಇಷ್ಟಕ್ಕೆಲ್ಲ ಕಾರವಾಗಿದೆ.ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯ ಪಾಠಗಳನ್ನ ಕೈಬಿಟ್ಟು ಹೊಸ ಪಾಠ ಸೇರ್ಪಡೆ ಮಾಡಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿದೆ.
ಹತ್ತನೇ ತರಗತಿಯಲ್ಲಿ ಹೆಡ್ಗೆವಾರ್ ಪಾಠ ಹಾಗೂ ಚಕ್ರವರ್ತಿ ಸೂಲಿಬೆಲೆ ಪಾಠಗಳ ಸೇರ್ಪಡೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಮಾಜಿಕ ಜಾಲತಾಣದಲ್ಲಿ ಭಗತ್ ಸಿಂಗ್ ಪಾಠ ಕೈಬಿಟ್ಟ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು. ವಿರೋಧದ ಬೆನ್ನಲೆ ಭಗತ್ ಸಿಂಗ್ ಪಾಠ ಕೈಬಿಟ್ಟಿಲ್ಲ. ಪಠ್ಯ ಮುದ್ರಣ ಹಂತದಲ್ಲಿ ಇದೆ ಅಂತಾ ಸಮರ್ಥಿಸಿಕೊಂಡಿರುವ ಶಿಕ್ಷಣ ಇಲಾಖೆ, ಭಗತ್ ಸಿಂಗ್ ಪಾಠವನ್ನ ಮತ್ತೆ ಹತ್ತನೆಯ ತರಗತಿಯ ಕನ್ನಡ ಪಠ್ಯಕ್ಕೆ ಸೇರಿಸಿದೆ. ಆದ್ರೆ ಇದರ ಜೊತೆಗೆ ಚಕ್ರವರ್ತಿ ಸೂಲಿಬೆಲೆಯ ತಾಯಿ ಭಾರತೀಯ ಅಮರಪುತ್ರರು ಎಂಬ ಪಾಠವನ್ನ ಹತ್ತನೆ ತರಗತಿಗೆ ಸೇರಿಸಿರುವುದು ಹಲವು ವಿರೋಧಕ್ಕೆ ಕಾರಣವಾಗಿದೆ.ಇದರ ಜೊತೆಗೆ ಟಿಪ್ಪು , ಬಸವಣ್ಣ, ಕುವೆಂಪು, ನಾರಾಯಣ ಗುರು ಸೇರಿದಂತೆ ಹಲವರ ಪಾಠಕ್ಕೆ ಕತ್ತರಿ ಹಾಕಿದ ವಿಚಾರ ಹರದಾಡಿದ ಬೆನ್ನಲೆ ಈ ಎಲ್ಲ ವಿವಾದಕ್ಕೆ ಬ್ರೇಕ್ ಹಾಕಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಇಂದು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು.
ಸದ್ಯ ಬುಗಿಲೇದಿರುವ ಪಠ್ಯ ವಿವಾದಕ್ಕೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಕೆಲವರಿಗೆ ಈ ನೆಲದ ವಿಚಾರ ಕಂಡ್ರೆ ಆಗಲ್ಲ ರಾಷ್ಟ್ರೀಯತೆ ಅಂದ್ರೆ ಅದು ಬಿಜೆಪಿಯದು ಅಂದು ಕೊಂಡಿದ್ದಾರೆ. ವಿಷಯದ ಬಗ್ಗೆ ಚರ್ಚೆಗೆ ಬರುವುದಾದ್ರೆ ನಾವು ಸಿದ್ಧ ಅವರು ವಿಷಯದ ಬಗ್ಗೆ ಚರ್ಚೆ ಮಾಡೊದಕ್ಕೆ ಸಿದ್ದರಿಲ್ಲ. ನೀಚ ಮಟ್ಟಕ್ಕೆ ಇಳಿದು ವಿವಾದ ಮಾಡ್ತಾ ಇದ್ದಾರೆ. ಪಠ್ಯದಲ್ಲಿ ಜಾತಿ ಹಿಡದು ನೀಚ ಮಟ್ಟದ ವಿರೋದಕ್ಕೆ ಮುಂದಾಗಿದ್ದಾರೆ. ಕುವೆಂಪು ಅವಮಾನ ವಿಚಾರ ಕುವೆಂಪು ಬಗ್ಗೆ ನಾವು ಎಷ್ಟು ಪಠ್ಯ ಸೇರಿಸಿದ್ದೀವಿ ನೋಡಲಿ. ಅವರು ಎಷ್ಟು ಪಠ್ಯ ಸೇರಿಸಿದ್ದಾರೆ. ನಾವು ಎಷ್ಟು ಪಠ್ಯ ಕುವೆಂಪು ಬಗ್ಗೆ ಸೇರಿಸಿದ್ದೀವಿ ಹೇಳಲಿ ಕುವೆಂಪು ಬಗ್ಗೆ ಅವಮಾನ ನಾವು ಮಾಡಿಲ್ಲ. ಇದೆಲ್ಲ ಸುಳ್ಳು ಸುದ್ದಿ.. ಹೆಡ್ಗೆವಾರ್ ಪಾಠ ಸಮರ್ಥನೆ ಜೊತೆಗೆ ಟಿಪ್ಪು ಬಗ್ಗೆ ಪಾಠ ಕೈಬಿಟ್ಟಿದ್ದು ಸೂಲಿಬೆಲೆ ಪಾಠ ಸೇರ್ಪಡೆಯನ್ನ ಸಮರ್ಥಿಸಿಕೊಂಡ್ರು. ಎಲ್ಲಾ ವಿವಾದಗಳಿಗೂ ಸ್ಪಷ್ಟನೆ ನೀಡಿದ್ರು.
ಇನ್ನು RSS ಸಂಸ್ಥಾಪಕ ಹೆಡ್ಗೆವಾರ್ ಪಾಠ ಸೇರ್ಪಡೆಗೆ ಭಾರಿ ವಿರೋಧ ವ್ಯಕ್ತಪಡಿಸಿ ಕೇಸರಿ ಪಠ್ಯಕ್ರಮ ವಿರೋಧಿಸಿ ರಾಜ್ಯಮಟ್ಟದ ಸಮಾಲೋಚನಾ ಸಭೆಯನ್ನ ಬೆಂಗಳೂರಿನ ಹಳೆ ವಿದ್ಯಾರ್ಥಿಗಳ ಅಸೋಸಿಯೇಷನ್ ಹಾಲ್ನಲ್ಲಿ ಮಾಡಲಾಯ್ತು. ವಿದ್ಯಾರ್ಥಿ ಸಂಘಟನೆಗಳಿಂದ ಸಮಾಲೋಚನಾ ಸಭೆ ಮಾಡಿದ್ದು ಸಭೆಯಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗಿಯಾಗಿದ್ರು. ಸರ್ಕಾರದ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿದರು.
ಒಟ್ನಲ್ಲಿ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಪರಿಷ್ಕರಣೆ ದಿನಕ್ಕೊಂದು ವಿವಾದಕ್ಕೆ ಕಾರಣವಾಗ್ತಿದ್ದು, ತೀವ್ರ ವಿರೋಧದ ಬೆನ್ನಲೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಕೂಡಾ ಸ್ಪಷ್ಟನೆ ನೀಡಿ ತೆರೆ ಎಳೆಯಲು ಮುಂದಾಗಿದ್ದಾರೆ. ಆದ್ರೆ ಇದು ಇಷ್ಟಕ್ಕೆ ತಣ್ಣಗಾಗುತ್ತಾ ಅಥವಾ ಮುಂದಿನ ದಿನಗಳಲ್ಲಿ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಾ ಅಂತಾ ಕಾದು ನೋಡಬೇಕಿದೆ
PublicNext
24/05/2022 04:43 pm