ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್-01 ರಿಂದ ಮಕ್ಕಳಿಗೆ ಶೇಂಗಾ ಚಿಕ್ಕಿ-ಬಾಳೆ ಹಣ್ಣು-ಮೊಟ್ಟೆ ವಿತರಣೆ !

ಬೆಂಗಳೂರು: ಶಾಲೆ ಮಕ್ಕಳಲ್ಲಿಯ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಈಗೊಂದು ನಿರ್ಧಾರಕ್ಕೆ ಬಂದಿದೆ. ಜೂನ-1 ರಿಂದಲೇ ಆ ಒಂದು ನಿರ್ಧಾರ ಜಾರಿಗೆ ಬರಲಿದೆ.

ಹೌದು. ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ,ಬಾಳೆ ಹಣ್ಣು ಹಾಗೂ ಶೇಂಗಾ ಚಿಕ್ಕಿಯನ್ನ ಕೊಡಲು ಸರ್ಕಾರ ಡಿಸೈಡ್ ಮಾಡಿದೆ. ಕಲ್ಯಾಣ ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಲಿಗೆ ಈ ಒಂದು ವ್ಯವಸ್ಥೆಯನ್ನ ಮಾಡಲಾಗಿದೆ.

ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಪೂರಕ ಪೌಷ್ಟಿಕ ಕಾರ್ಯಕ್ರಮ ಅನು‍ಷ್ಠಾನಗೊಳಿಸಲಾಗಿದ್ದು, ಬೀದರ್, ರಾಯಚೂರು, ಕಲಬುರಗಿ,ಯಾದಗಿರಿ,ಕೊಪ್ಪಳ,ಬಳ್ಳಾರಿ,ವಿಜನಗರ,ವಿಜಯಪುರ ಹೀಗೆ ಒಟ್ಟು 8 ಜಿಲ್ಲೆಯಲ್ಲಿ ಜೂನ್-1 ರಿಂದ ಸೆಪ್ಟೆಂಬರ್-11 ರ ವರೆಗೂ ಹಾಗೂ ಅಕ್ಟೋಬರ್‌ನಿಂದ ಫೆಬ್ರವರಿ ಈ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

Edited By :
PublicNext

PublicNext

24/05/2022 10:10 am

Cinque Terre

86.51 K

Cinque Terre

7

ಸಂಬಂಧಿತ ಸುದ್ದಿ