ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಉಂಟಾದ ಕಲಿಕಾ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ.
ಹೌದು. 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದ್ದು, ಮೇ.16ರಿಂದ ರಾಜ್ಯಾದ್ಯಂತ ಶಾಲೆ ಆರಂಭಕ್ಕೆ ಸೂಚನೆ ನೀಡಿದೆ.
2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯಲ್ಲಿ ಪ್ರಸಕ್ತ ವರ್ಷವನ್ನು 'ಕಲಿಕಾ ಚೇತರಿಕೆ ವರ್ಷ'ವೆಂದು ಸಂಕಲ್ಪಿಸಲಾಗಿದೆ. ವಾರ್ಷಿಕ ಪಠ್ಯವಸ್ತು ಬೋಧನೆಯನ್ನು ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಸಂಯೋಜಿಸಿ, ವಾರ್ಷಿಕ ಕಾರ್ಯಸೂಚಿಯನ್ನು ತಯಾರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
2022-23ನೇ ಶೈಕ್ಷಣಿಕ ವೇಳಾಪಟ್ಟಿಯಂತೆ ದಿನಾಂಕ 14-05-2022ರಿಂದ ಶಾಲೆ ಪ್ರಾರಂಭ ಮತ್ತು ಪ್ರಾರಂಭೋತ್ಸವದ ಪೂರ್ವ ಸಿದ್ಧತೆ ಆರಂಭಗೊಳ್ಳಲಿದೆ. ದಿನಾಂಕ 16-05-2022ರಿಂದ ಶಾಲಾ ಪ್ರಾರಂಭೋತ್ಸವ ಶುರುವಾಗಲಿದೆ. ಅಲ್ಲದೇ ದಿನಾಂಕ 03-10-2022 ರಿಂದ ದಿನಾಂಕ 16-10-2022ರವರೆಗೆ ದಸರಾ ರಜೆಯನ್ನು ಘೋಷಿಸಲಾಗಿದೆ.
PublicNext
30/04/2022 10:05 am