ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಸಿಗೆ ರಜೆಯಲ್ಲಿರುವ ಮಕ್ಕಳೆ ಶಾಲೆಗೆ ಹೋಗಲು ಸಿದ್ಧರಾಗಿ

ಬೆಂಗಳೂರು: ಪರೀಕ್ಷೆ ಬರೆದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳು ಸದ್ಯ ಬೇಸಿಗೆ ರಜೆಯಲ್ಲಿ ಇದ್ದಾರೆ. ಮೇ 15ರವರೆಗೆ ಬೇಸಿಗೆ ರಜೆ ಇದ್ದು, 16 ರಿಂದ ಶಾಲೆ ಆರಂಭವಾಗಲಿದೆ.

ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಾರ್ವಜನಿಕ‌ ಶಿಕ್ಷಣ ಇಲಾಖೆ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.

ಕಳೆದ ಮೂರು ವರ್ಷಗಳ ಚಟು ವಟಿಕೆ ಅವಲೋಕಿಸಿ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷದಲ್ಲಿ ಮಕ್ಕಳಿಗೆ ಭೌತಿಕ ಶಿಕ್ಷಣ ಶೇ.50-60 ರಷ್ಟು ಆಗಿದೆ. ಕೊರೋನಾ ಕಾರಣ ಆನ್ ಲೈನ್ ಕ್ಲಾಸಗಳ ನಡೆದಿದ್ದವು. ಸರಿಯಾದ ಪಾಠವನ್ನು ಮಕ್ಕಳಿಗೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಸಲ ಬೇಗ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಿದೆ.

ಇನ್ನೂ 2022 ಮೇ16ರಿಂದ ಅಕ್ಟೋಬರ್ 2ರವರೆಗೆ ಮೊದಲಾರ್ಧ ಹಾಗೂ 17ರಿಂದ 2023 ಏಪ್ರಿಲ್ 10ರವರೆಗೆ ದ್ವಿತೀಯಾರ್ಧ ತರಗತಿ ನಡೆಯಲಿದೆ. ಅಕ್ಟೋಬರ್ 2ರಿಂದ 17ವರೆಗೆ ದಸರಾ ರಜೆ ಇರಲಿದೆ.

ವರದಿ - ಗಣೇಶ್ ಹೆಗಡೆ

Edited By : Vijay Kumar
PublicNext

PublicNext

21/04/2022 02:42 pm

Cinque Terre

43.25 K

Cinque Terre

0