ವರದಿ: ಗಣೇಶ್ ಹೆಗಡೆ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡಿ ಆದೇಶ ಹೊರಡಿಸ ಲಾಗಿದ್ದು, ಪ್ರತಿ ವಿದ್ಯಾರ್ಥಿಯಿಂದ ಹೆಚ್ಚುವರಿ 100 ರೂಪಾಯಿ ಪಾವತಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿಸಿದೆ.
ಕಳೆದ 2019-20ನೇ ಸಾಲಿನಲ್ಲಿ ಪರೀಕ್ಷೆ ನಡೆಸಿದಾಗ, SOP ಅನುಪಾಲನೆಯಿಂದಾಗಿ ಮಂಡಳಿ ಆಯವ್ಯಯದಲ್ಲಿ ಹಂಚಿಕೆ ಮಾಡಿಕೊಂಡಿದ್ದ ಅನುದಾನಕ್ಕಿಂತ ಒಟ್ಟಾರೆ ಸುಮಾರು 10.61ಕೋಟಿ ರೂ. ಹೆಚ್ಚುವರಿ ವೆಚ್ಚವಾಗಿದೆ.
ಈ ಹೆಚ್ಚುವರಿ ಹೊರೆ ಸರಿದೂಗಿಸಲು ಪ್ರತಿ ವಿದ್ಯಾರ್ಥಿಗೆ ತಲಾ 100 ರೂ. ಹೆಚ್ಚಿಸಿದೆ. ಪ್ರಥಮ ಬಾರಿಗೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ 485 ರಿಂದ 585 ರೂ.ಗೆ ಏರಿಕೆ. ಲ್ಯಾಮಿನೇಷನ್ ಶುಲ್ಕ 22 ರೂ. ಇದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಒಂದು ವಿಷಯಕ್ಕೆ 320 ರೂ. ಇದ್ದದ್ದು, ಇದೀಗ 370 ರೂ.ಗೆ ಏರಿಕೆ, ಎರಡು ವಿಷಯಕ್ಕೆ- 386 ರೂ. ನಿಂದ 461 ರೂ.ಗೆ ಏರಿಕೆ. ಮೂರು ವಿಷಯ ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ- 520 ರೂ.ನಿಂದ 620 ರೂ.ಗೆ ಏರಿಕೆ.
PublicNext
09/12/2021 04:43 pm