ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ ಐಡಿಯಾ ಪ್ರೋತ್ಸಾಹಿಸಲು ದೆಹಲಿ ಸರ್ಕಾರದ ಟಿವಿ ಪ್ರೋಗ್ರಾಮ್

ನವದೆಹಲಿ: ಸರ್ಕಾರ ಈಗ ಒಂದು ಹೊಸ ಪ್ರೋಗ್ರಾಮ್ ಪ್ಲಾನ್‌ ಮಾಡಿದೆ. ಮಕ್ಕಳಲ್ಲಿರೋ ಹೊಸ ಹೊಸ ಐಡಿಯಾಗಳನ್ನ ಪ್ರೋತ್ಸಾಹಿಸೋದೇ ಈ ಹೊಸ ಪ್ರೊಗ್ರಾಂ ನ ಮೂಲ ಉದ್ದೇಶ. ಇದರ ಇನ್ನಷ್ಟು ವಿವರಣ ಏನೂ ಅಂತ ಹೇಳ್ತೀವಿ ಬನ್ನಿ.

ದೆಹಲಿ ಸರ್ಕಾರ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿಯೇ ಒಂದು ಟಿವಿ ಪ್ರೋಗ್ರಾಮ್ ಮಾಡುತ್ತಿದೆ. ಈ ಪ್ರೋಗ್ರಾಮ್‌ ನಲ್ಲಿ ವಿದ್ಯಾರ್ಥಿಗಳು ತಮ್ಮ ಸ್ಟಾರ್ಟ್‌ ಅಪ್‌ನ ಹೊಸ ಐಡಿಯಾಗಳನ್ನ ಹೇಳಬಹುದು. ವಿಶೇಷ ಅಂದ್ರೆ ಈ ಐಡಿಯಾಗಳನ್ನ ಕೇಳಲು ಹೂಡಿಕೆದಾರರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಈಗಾಗಲೇ ಈ ಕಾರ್ಯಕ್ರಮದಲ್ಲಿ 3 ಲಕ್ಷ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದಾರೆ. ಆದರೆ ಅವುಗಳಲ್ಲಿ ಕೇವಲ 51 ಸಾವಿರ ಮಾತ್ರ ಆಯ್ಕೆ ಆಗಿವೆ. ಇದರಲ್ಲಿ ಭಾಗಿ ಆಗೋ ಪ್ರತಿ ವಿದ್ಯಾರ್ಥಿಗಳಿಗೆ 2000 ರೂಪಾಯಿ ದುಡ್ಡನ್ನ ಕೂಡ ಕೊಡಲಾಗುತ್ತಿದೆ.

Edited By :
PublicNext

PublicNext

29/11/2021 05:58 pm

Cinque Terre

25.44 K

Cinque Terre

0