ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನ ಅಧಿಕೃತ ವೆಬ್ ಸೈಟ್ pue.kar.nic.in ನಲ್ಲಿ ಬಿಡುಗಡೆ ಮಾಡಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಡಿಸೆಂಬರ್ 9ರಿಂದ ಪರೀಕ್ಷೆಗಳನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ. ಮೊದಲ ಶಿಫ್ಟ್ ಬೆಳಿಗ್ಗೆ 9ರಿಂದ ಮಧ್ಯಾಹ್ನ 12:15ರವರೆಗೆ ಮತ್ತು ಮಧ್ಯಾಹ್ನ 2ರಿಂದ 5.15ರವರೆಗೆ ನಡೆಯಲಿದೆ.
ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
ಡಿ.9: ಇತಿಹಾಸ, ಭೌತಶಾಸ್ತ್ರ
ಡಿ.10: ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಡಿ.11: ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಡಿ.15 : ಸ೦ಖ್ಯಾ ಶಾಸ್ತ್ರ (Statistics)
ಡಿ.16: ಸಮಾಜಶಾಸ್ತ್ರ, ಗಣಿತ, ಸಾಮಾನ್ಯ ಗಣಿತ
ಡಿ.17: ಹಿಂದಿ, ಉರ್ದು, ಸಂಸ್ಕೃತ
ಡಿ.18: ಇಂಗ್ಲಿಷ್
ಡಿ.20: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಡಿ.21: ಅಕೌಂಟೆನ್ಸಿ, ಎಜುಕೇಶನ್, ಹೋಮ್ ಸೈನ್ಸ್
ಡಿ.22: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಐಚ್ಛಿಕ ಕನ್ನಡ
ಡಿ.23: ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ
PublicNext
22/11/2021 09:11 am