ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಥಿಲಾವಸ್ಥೆ ಕಟ್ಟಡಗಳ ಶಾಲೆಗಳನ್ನ ಬಳಸದಂತೆ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಇಡೀ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.ಶಾಲೆಗಳಂತೂ ಬಹುತೇಕ ರಜೆ ಘೋಷಿಸಿವೆ.ಹೀಗಿರೋವಾಗ ರಾಜ್ಯ ಶಿಕ್ಷಣ ಇಲಾಖೆ ಈಗೊಂದು ಆದೇಶ ಹೊರಡಿಸಿದೆ. ಶಿಥಿಲಾವಸ್ಥೆಯಲ್ಲಿರೋ ಶಾಲೆ ಮತ್ತು ಕೊಠಡಿಗಳನ್ನ ಬಳಸದಂತೇನೆ ಆದೇಶ ಮಾಡಲಾಗಿದೆ.

ಭಾರಿ ಮಳೆಗೆ ಈಗ ಹಳೆ ಗೋಡೆಗಳು, ಹಳೆ ಕಟ್ಟಡಗಳು ಕುಸಿದು ಬೀಳುತ್ತಿವೆ.ಅದಕ್ಕೇನೆ ಶಿಕ್ಷಣ ಇಲಾಖೆ ಈಗಲೇ ಜಾಗೃತಗೊಂಡಿದೆ.ಶಾಲೆಯ ಹಳೆ ಕಟ್ಟಗಳು ಮತ್ತು ಹಳೆ ಕೊಠಡಿಗಳಿದ್ದರೆ ಅವುಗಳನ್ನ ಬಳಸಲೇ ಬೇಡಿ ಅಂತಲೇ ಹೇಳಿದೆ. ಅಂತಹ ಶಾಲೆಗಳಿಗೆ ಉಪನಿರ್ದೇಶಕರು, ಡಟಯ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಶಿಕ್ಷಣ ಇಲಾಖೆ ಆದೇಶ ಮಾಡಿದೆ.

ಶಾಲೆಯ ಕಟ್ಟ ಮತ್ತು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೇ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಜಿಲ್ಲಾ ಪಂಚಾಯಿತಿಗಳಿಗೆ ಮನವಿ ಸಲ್ಲಿಸಬೇಕು. ಅನುದಾನ ಬಿಡುಗಡೆ ಮಾಡಿಕೊಂಡು ಶಾಲೆ ದುರಸ್ಥಿ ಕಾರ್ಯವನ್ನ ತಕ್ಷಣವೇ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಶಿಥಿಲಾವಸ್ಥೆಯ ಶಾಲೆಗಳಲ್ಲಿ ಏನಾದರೂ ಅವಘಡ ಆದರೆ ಅದಕ್ಕೆ ಶಾಲಾ ಮುಖ್ಯಸ್ಥರು, ಸಿ.ಆರ್.ಪಿ, ಬಿ.ಆರ್.ಪಿ, ಕ್ಷೇತ್ರ ಶಿಕ್ಚಣಾಧಿಕಾರಿಗಳು ಉಪನಿರ್ದೇಶಕರೇ ನೇರ ಹೊಣೆಯಾಗಿರುತ್ತಾರೆ ಎಂದು ಹೇಳಲಾಗಿದೆ.

Edited By :
PublicNext

PublicNext

20/11/2021 12:07 pm

Cinque Terre

21.96 K

Cinque Terre

2

ಸಂಬಂಧಿತ ಸುದ್ದಿ