ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ ಡಿಎ ಪರೀಕ್ಷೆ ಕೀ ಉತ್ತರ ಲಭ್ಯ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ ಸಿ) ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್ ಸಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆ. 19ರಂದು ಪರೀಕ್ಷೆ ನಡೆಸಿತ್ತು. ಇದೀಗ ಪ್ರಶ್ನೆಗಳ ಸರಿಯುತ್ತರಗಳನ್ನು ಕೆಪಿಎಸ್ ಸಿ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

2020ರ ಮೇ 14ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆ ನಡೆದಿದೆ. ವಿಷಯ ಸಂಕೇತ 413, 414 ಹಾಗೂ 415ರ ಕೀ ಉತ್ತರಗಳನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚಿಸಿದೆ. ನಿಗದಿತ ನಮೂನೆಯಲ್ಲಿ ಆಕ್ಷೇಪಣೆಗಳನ್ನು ದಾಖಲಿಸಬೇಕಿದ್ದು, ಸೆ.29 ಕೊನೆಯ ದಿನ. ವಿವರಗಳಿಗೆ http://kpsc.kar.nic.in/ ಸಂಪರ್ಕಿಸಿ.

Edited By : Nirmala Aralikatti
PublicNext

PublicNext

24/09/2021 12:29 pm

Cinque Terre

59.72 K

Cinque Terre

0

ಸಂಬಂಧಿತ ಸುದ್ದಿ