ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

JEE ಫಲಿತಾಂಶ ಪ್ರಕಟ: ಕರ್ನಾಟಕದ ಗೌರಬ್ ದಾಸ್ ಸೇರಿ 18 ಮಂದಿ ದೇಶಕ್ಕೆ ಪ್ರಥಮ ಸ್ಥಾನ

ನವದೆಹಲಿ: ಜೆಇಇ ಮೇಯ್ನ್​ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕದ ಗೌರಬ್ ದಾಸ್ ಸೇರಿ 18 ಮಂದಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಕೇಂದ್ರಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಮೇಯ್ನ್​ ಪರೀಕ್ಷೆಯಲ್ಲಿ ಈ ವರ್ಷ ಒಟ್ಟು 44 ಅಭ್ಯರ್ಥಿಗಳು 100 ಪರ್ಸೆಂಟೈಲ್ ಮಾರ್ಕ್ಸ್ ಗಳಿಸಿದ್ದಾರೆ. ಕರ್ನಾಟಕದ ವಿದ್ಯಾರ್ಥಿಯೂ ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರಾಂಕ್ ಹಂಚಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದೆ.

ದೇಶಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ:

ಗೌರಬ್ ದಾಸ್ (ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪನೀಶ್ (ಆಂಧ್ರಪ್ರದೇಶ), ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಮತ್ತು ಮೃದುಲ್ ಅಗರ್ವಾಲ್ (ರಾಜಸ್ಥಾನ), ರುಚಿರ್ ಬನ್ಸಾಲ್ ಮತ್ತು ಕಾವ್ಯಾ ಚೋಪ್ರಾ (ದೆಹಲಿ), ಅಮಯ್ಯ ಸಿಂಘಾಲ್ ಮತ್ತು ಪಾಲ್ ಅಗರ್ವಾಲ್ (ಉತ್ತರ ಪ್ರದೇಶ), ಕೊಮ್ಮ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ (ತೆಲಂಗಾಣ), ಪಸಾಲ ವೀರ ಶಿವ, ಕರ್ಣಂ ಲೋಕೇಶ್ ಮತ್ತು ಕಂಚನಪಲ್ಲಿ ರಾಹುಲ್ ನಾಯ್ಡು, (ಆಂಧ್ರ ಪ್ರದೇಶ), ಪುಲ್ಕಿತ್ ಗೋಯಲ್ (ಪಂಜಾಬ್) ಮತ್ತು ಗುರಂರೀತ್ ಸಿಂಗ್ (ಚಂಡೀಗಡ).

ಎನ್​ಟಿಎ ನಡೆಸಿದ ನಾಲ್ಕು ಹಂತಗಳ ಜೆಇಇ ಮೇಯ್ನ್​ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಅತ್ಯುತ್ತಮ ಅಂಕಗಳನ್ನು ಪರಿಗಣಿಸಿ, ಈ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕನ್ನಡ, ಇಂಗ್ಲೀಷ್​ ಮತ್ತು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾದ ಜೆಇಇ ಮೇಯ್ನ್​​ ಪರೀಕ್ಷೆಗಳನ್ನು ದೇಶಾದ್ಯಂತ 9.34 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

Edited By : Vijay Kumar
PublicNext

PublicNext

15/09/2021 02:55 pm

Cinque Terre

32.41 K

Cinque Terre

0