ಬೆಂಗಳೂರು: ಭಾರತಕ್ಕೆ ಫೆಬ್ರವರಿಯಲ್ಲಿ ಕೊರೊನಾ ಎಂಟ್ರಿ ಕೊಟ್ಟ ನಂತರ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿ ಶಾಲೆ-ಕಾಲೇಜುಗಳು ರಜೆ ಘೋಷಿಸಿದ್ದವು.
ಇದೀಗ ಇಂದಿನಿಂದ ಮತ್ತೆ ಶಾಲೆ-ಕಾಲೇಜುಗಳು ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜ. 1ರಿಂದ, 2019-20ನೇ ಸಾಲಿನಲ್ಲಿ ವಿತರಿಸಿದ್ದ ಸ್ಮಾರ್ಟ್ ಕಾರ್ಡ್ ಪಾಸ್ನಲ್ಲೇ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ಹಳೆಯ ಬಸ್ ಪಾಸ್, ಶಾಲಾ-ಕಾಲೇಜಿಗೆ ದಾಖಲಾಗಿರುವ ಶುಲ್ಕ ಪಾವತಿ ರಸೀದಿ ಹಾಗೂ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದು.
ಜ. 1ರಿಂದ ಮುಂದಿನ ಆದೇಶದವರೆಗೆ ಸಾಮಾನ್ಯ ಸೇವೆಯ ಬಸ್ ಗಳಲ್ಲಿ ವಾಸ ಸ್ಥಳದಿಂದ ಶಾಲಾ-ಕಾಲೇಜಿಗೆ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
PublicNext
01/01/2021 09:22 am