ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್ ನಲ್ಲೂ ಶಾಲೆ ತೆರೆಯುವುದು ತರವಲ್ಲ : ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು

ಬೆಂಗಳೂರು: ಈಗಾಗಲೇ ಪದವಿ ತರಗತಿಗಳು ನವೆಂಬರ್ 17ರಿಂದಲೇ ಪ್ರಾರಂಭಗೊಂಡಿವೆ.

ಡಿಸೆಂಬರ್ ತಿಂಗಳಲ್ಲಿ ಶಾಲೆಗಳನ್ನ ತೆರೆಯುವುದು ಸೂಕ್ತವಲ್ಲ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.

ಡಿಸೆಂಬರ್ ತಿಂಗಳಲ್ಲಿನ ಶೀತ ವಾತಾವರಣದಿಂದ ಕೋವಿಡ್ ಸೋಂಕು ಸುಲಭವಾಗಿ ಹರಡುವ ಅಪಾಯ ಇರುವುದರಿಂದ ಶಾಲೆ ತೆರೆಯುವುದು ಸರಿಯಲ್ಲ ಎಂದು ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷತೆಯ ಈ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸರ್ಕಾರ ಡಿಸೆಂಬರ್ ತಿಂಗಳಲ್ಲಿ ಶಾಲೆಗಳ ಪುನಾರಂಭ ಮಾಡುವ ಇರಾದೆಯಲ್ಲಿದೆ.

ಇವತ್ತು ಮುಖ್ಯಮಂತ್ರಿಗಳು ಶಾಲೆಗಳನ್ನ ತೆರೆಯುವ ಬಗ್ಗೆ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸಮಾಲೋಚನೆ ಮಾಡುತ್ತಿರುವ ಹೊತ್ತಿನಲ್ಲೇ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಬಂದಿದೆ.

ಸಮಿತಿಯ ಈ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸತ್ತಾ ಎನ್ನುವುದನ್ನು ತಿಳಿಯಲಿದೆ.

ವಿದ್ಯಾರ್ಥಿಗಳ ಹಾಜರಾತಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹಲವು ಕಡೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿವೆ.

ತಾಂತ್ರಿಕ ಸಲಹಾ ಸಮಿತಿ ಕೂಡ ಈ ವಿಚಾರವನ್ನು ಗಮನಿಸುತ್ತಿರುವುದಾಗಿ ಹೇಳಿದೆ.

ಮುಂದಿನ ದಿನಗಳಲ್ಲಿ ಪದವಿ ತರಗತಿಗಳ ಬೆಳವಣಿಗೆಯನ್ನ ಗಮನಿಸಿ ಶಾಲೆಗಳ ಪುನಾರಂಭದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂಬುದು ಈ ಸಮಿತಿ ಅಭಿಪ್ರಾಯ.

Edited By : Nirmala Aralikatti
PublicNext

PublicNext

23/11/2020 01:25 pm

Cinque Terre

35.32 K

Cinque Terre

0