ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಮಧ್ಯೆ ಭರದಿಂದ ಸಾಗಿದೆ ಶಾಲಾ-ಕಾಲೇಜು ಪುನರಾರಂಭ ಸಿದ್ಧತೆ

ನವದೆಹಲಿ: ಕೊರೊನಾ ಲಾಕ್ ಡೌನ್ ನಿಂದಾಗಿ ಕದಮುಚ್ಚಿದ್ದ ಶಾಲಾ ಕಾಲೇಜುಗಳ ಮರುಆರಂಭಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಗಾಗುತ್ತಿವೆ.

ಇಂದಿನಿಂದ ಹರಿಯಾಣ, ಅಸ್ಸಾಂ ಮತ್ತು ಜಮ್ಮು ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳು ಪ್ರಾಯೋಗಿಕವಾಗಿ ಪುನಾರಂಭಕ್ಕೆ ರಾಜ್ಯ ಸರ್ಕಾರಗಳು ಕೂಡಾ ಗ್ರೀನ್ ಸಿಗ್ನಲ್ ನೀಡಿವೆ.

ಬಿಹಾರದಲ್ಲಿ ಸೆಪ್ಟೆಂಬರ್ 28,ತ್ರಿಪುರದಲ್ಲಿ ಅಕ್ಟೋಬರ್ 5 ಅಕ್ಟೋಬರ್ 1 ರಿಂದ ತಮಿಳುನಾಡು, ಉತ್ತರ ಪ್ರದೇಶ, ದೆಹಲಿಯಲ್ಲಿ 10,11,12 ನೇ ತರಗತಿ ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ತೆರಳಬಹುದಾಗಿದ್ದು ಶಿಕ್ಷಕರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಬಹುದು, ಶಾಲಾ ಕಾಲೇಜು ತೆರಳುವ ಮುನ್ನ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಅಲ್ಲಿಯ ರಾಜ್ಯ ಸರ್ಕಾರ ಹೇಳಿದೆ.

ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶಗಳಲ್ಲಿ 9 ರಿಂದ 12ನೇ ತರಗತಿ ಮಕ್ಕಳು ಶಾಲೆಗೆ ತೆರಳಿ ಶಿಕ್ಷಕರಿಂದ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.

ಆದರೆ ಶಾಲೆಗೆ ಬರುವ ಮುನ್ನ ಪೊಷಕರ ಅನುಮತಿ ಕಡ್ಡಾಯ ಎಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

26/09/2020 02:58 pm

Cinque Terre

64.09 K

Cinque Terre

0