ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೀಸ್ ವಸೂಲಿಗೆ ಖಾಸಗಿ ಶಾಲೆಯಿಂದ ಮತ್ತೊಂದು ಪ್ಲಾನ್ : ಫೀಸ್ ಕಟ್ಟದಿದ್ದರೆ ಆನ್ ಲೈನ್ ಪಾಠ ಬಂದ್!

ಡೆಡ್ಲಿ ಸೋಂಕು ಕೊರೊನಾ ಹಾವಳಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಿದ ಸರ್ಕಾರ ಆನ್ ಶಿಕ್ಷಣಕ್ಕೆ ಮೊರೆಹೋಗಿದೆ.

ಇದರಿಂದ ಖಾಸಗಿ ಶಾಲೆಗಳು ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಫೀಸ್ ವಸೂಲಿಗಾಗಿ ಮತ್ತೊಂದು ಮಾರ್ಗ ಕಂಡುಕೊಂಡಿರುವ ಶಾಲಾ ಆಡಳಿತ ಮಂಡಳಿಗಳು ಫೀಸ್ ಕಟ್ಟದ ಮಕ್ಕಳಿಗೆ ಆನ್ ಶಿಕ್ಷಣ ಬಂದ್ ಮಾಡುವುದಾಗಿ ಬೆದರಿಕೆವೊಡ್ಡಿವೆ.

ಪೋಷಕರು ತಮ್ಮ ಮಕ್ಕಳ ಫೀಸು ಕಟ್ಟದಿದ್ದರೆ ಅವರಿಗೆ ನೀಡುತ್ತಿರುವ ಆನ್ಲೈನ್ ಪಾಠಗಳನ್ನು ನಿಲ್ಲಿಸುವುದಾಗಿ ಘೋಷಿಸಿದ ನಂತರ ಶಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಖಾಸಗಿ ಶಾಲೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಸೂಚಿಸುವುದಾಗಿ ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಖಾಸಗಿ ಶಾಲೆಗಳ ಸಂಘಟನೆ ತೋಡಿಕೊಳ್ಳುತ್ತಿರುವ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆ, ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೇ ಪರಿಹಾರ ಸೂಚಿಸುವುದಾಗಿ ಹೇಳಿದರು.

ನವೆಂಬರ್ 27ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ.

ವರದಿಯಲ್ಲಿರುವ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು.

Edited By : Nirmala Aralikatti
PublicNext

PublicNext

25/11/2020 10:48 pm

Cinque Terre

77.8 K

Cinque Terre

9