ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆ ಆರಂಭ ವಿಚಾರ: ನಾಳೆಯೊಳಗೆ ಸಿಎಂ ಗೆ ವರದಿ

ಬೆಂಗಳೂರು- ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ನಿರಂತರ ಸಭೆಗಳನ್ನು ನಡೆಸಿದ್ದಾರೆ. ಸಭೆಯ ನಂತರ ವರದಿ ತಯಾರಾಗಿದ್ದು ಇಂದು ಅಥವಾ ನಾಳೆಯೊಳಗಾಗಿ ಈ ವರದಿ ಸಿಎಂ ಗೆ ಸಲ್ಲಿಕೆಯಾಗಲಿದೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ಪೂರ್ವ ಪ್ರಾಥಮಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆರಂಭದ ಬಗ್ಗೆ ಸಭೆ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಣ ತಜ್ಞರು, ಖಾಸಗಿ ಶಾಲೆಗಳು, ಹಾಗೂ ಶಿಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮಕ್ಕಳಿಗಾಗುವ ತೊಂದರೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ನವೆಂಬರ್ 17ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಅದರಂತೆ ಶಾಲೆಗಳ ಆರಂಭದ ಬಗ್ಗೆ ವರದಿ ಸಲ್ಲಿಕೆ ನಂತರ ತೀರ್ಮಾನವಾಗಲಿದೆ.

Edited By : Nagaraj Tulugeri
PublicNext

PublicNext

09/11/2020 10:28 am

Cinque Terre

69.9 K

Cinque Terre

2