ದಾವಣಗೆರೆ: ನಾಡಹಬ್ಬ ದಸರಾ ಪ್ರಯುಕ್ತ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಟ್ರಸ್ಟಿ ಹಾಗೂ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರಮವು ನೆರವೇರಿತು. 8 ನವ ಜೋಡಿಗಳಿಗೆ ಡಾ.ಶಾಮನೂರು ಶಿವಶಂಕರಪ್ಪನವರು ಆಶೀರ್ವದಿಸಿ ಶುಭ ಕೋರಿದರು. ಅದ್ಧೂರಿಯಾಗಿ ಕಾರ್ಯಕ್ರಮ ನೆರವೇರಿತು, ಈ ವೇಳೆ ಮಾತನಾಡಿ ಶಾಮನೂರು ಶಿವಶಂಕರಪ್ಪ, ಸತಿ-ಪತಿಗಳು ಪರಸ್ಪರ ಅರಿತುಕೊಂಡು ಜೀವನವನ್ನು ನಡೆಸಬೇಕು ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು.
ಈ ವೇಳೆ ಎಸ್‌ಕೆ ಜ್ಯೂವೆಲರ್ಸ್ ಮಾಲೀಕರು ನವದಂಪತಿಗಳಿಗೆ ತಾಳಿಕೊಟ್ಟು ಶುಭ ಹಾರೈಸಿದರು. ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಮಾಜಿ ಮೇಯರ್ ಗೋಣೆಪ್ಪ, ಆನಂದ್, ರುದ್ರಪ್ಪ, ಕರಿಗೇರ್ ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.
PublicNext
06/10/2022 10:29 pm